Advertisement

Mangaluru ವಿದ್ಯಾರ್ಥಿ ಸಫಿನ್‌ ಮುಸ್ತಫಾ ನೋಬಲ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್ಸ್‌ಗೆ

11:58 PM Jan 13, 2024 | Team Udayavani |

ಮಂಗಳೂರು: ಮಂಗಳೂರಿನ ಪ್ರಸ್ಟೀಜ್‌ ಇಂಟರ್‌ನ್ಯಾಶನಲ್‌ ಸ್ಕೂಲ್‌ನ 8ನೇ ತರಗತಿ ವಿದ್ಯಾರ್ಥಿ ಸಫಿನ್‌ ಮುಸ್ತಫಾ ಸತತ 2 ಗಂಟೆ 30 ನಿಮಿಷ 13 ಸೆಕೆಂಡುಗಳ ಕಾಲ ನೀರಿನ ಮೇಲೆ ತೇಲುವ (ಫ್ಲೋಟಿಂಗ್‌) ಮೂಲಕ ನೋಬಲ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್ಸ್‌ಗೆ ಲಗ್ಗೆ ಇಟ್ಟಿದ್ದಾರೆ.

Advertisement

ಪ್ರಸ್ಟೀಜ್‌ ಇಂಟರ್‌ನ್ಯಾಶನಲ್‌ ಸ್ಕೂಲ್‌ನ ಈಜುಕೊಳದಲ್ಲಿ ಶನಿವಾರ ಬೆಳಗ್ಗೆ ಈ ದಾಖಲೆ ನಿರ್ಮಿಸಲಾಯಿತು. ಈ ಸಂದರ್ಭದಲ್ಲಿ ನೋಬಲ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್ಸ್ ನ ಅಧಿಕಾರಿಗಳು, ಸಫಿನ್‌ ಅವರ ಪೋಷಕರಾದ ಅಬ್ದುಲ್‌ ಲತೀಫ್‌ ಮತ್ತು ಸಫಿಯಾ ಬಾನು ಉಪಸ್ಥಿತರಿದ್ದರು.

ಸಫಿನ್‌ ಅವರು ಅರೋಮಲ್‌ ಎ.ಎಸ್‌. ಅವರಿಂದ ತರಬೇತಿ ಪಡೆದಿದ್ದಾರೆ. ಈ ಹಿಂದೆ 2023ರಲ್ಲಿ ಆಂಧ್ರಪ್ರದೇಶದ ಕರಣಂ ಸ್ನೇಹಿತ್‌ ಸಿಂಹ ಅವರು 2 ಗಂಟೆ 21 ನಿಮಿಷ 53 ಸೆಕೆಂಡ್‌ಗಳ ಕಾಲ ನೀರಿನಲ್ಲಿ ತೇಲಾಡಿ ದಾಖಲೆ ನಿರ್ಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next