ಮಂಗಳೂರು: ಕುಂಟಿಕಾನ ಫ್ಲೈ ಓವರ್ ಬಳಿ ಕಳವಾದ ಟೆಂಪೋ ಟ್ರಾವೆಲರನ್ನು ಪತ್ತೆ ಹಚ್ಚಿರುವ ಪೊಲೀಸರು ಬೆಳಗಾವಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಅರೀಫ್ ಉಲ್ಲಾಖಾನ್, ಅಮಿತ್ ಬಾಹುಬಲಿ ಪಂಚೋಡಿ ಮತ್ತು ಸುರೇಂದ್ರ ಕುಮಾರ್ ಎನ್ನುವವರಾಗಿದ್ದು, ಕಳುವಾದ ಸುಮಾರು 15 ಲಕ್ಷ ರೂ. ಮೌಲ್ಯದ ಟೆಂಪೋ ಟ್ರಾವೆಲರನ್ನು ವಶಕ್ಕೆ ಪಡೆದಿದ್ದಾರೆ.
ಕುಂಟಿಕಾನ ಫ್ಲೈ ಓವರ್ ಬಳಿ ಟೆಂಪೋ ಟ್ರಾವೆಲರ್ ವಾಹನ ವನ್ನು ಸೆ.14ರಾತ್ರಿ 8:30 ಸಮಯಕ್ಕೆ ವಾಹನವನ್ನು ಪಾರ್ಕ್ ಮಾಡಲಾಗಿದ್ದು ಸೆ. 15 ರಂದು ಮಧ್ಯಾಹ್ನ 12. 30ಕ್ಕೆ ವಾಹನ ಕಳುವಾದ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆರೋಪಿಗಳು ಮತ್ತು ವಾಹನದ ಪತ್ತೆಗಾಗಿ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ರವರ ಆದೇಶದಂತೆ ಹಾಗೂ ಡಿಸಿಪಿ ಕಾನೂನು & ಸುವ್ಯವಸ್ಥೆ ಸಿದ್ದಾರ್ಥ್ ಗೋಯಲ್ ಮತ್ತು ಡಿಸಿಪಿ ಸಂಚಾರ ಮತ್ತು ಅಪರಾಧ ವಿಭಾಗದ ದಿನೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಎಸಿಪಿ ಕೇಂದ್ರ ಉಪ ವಿಭಾಗದ ಮಹೇಶ್ ಕುಮಾರ್ ರವರ ನೇತೃತ್ವದಲ್ಲಿ ಪೊಲೀಸ್ ಠಾಣಾ ನಿರೀಕ್ಷಕರಾದ ಭಾರತಿ ಜಿ ರವರ ಸಾರಥ್ಯದಲ್ಲಿ ವಿಶೇಷ ತಂಡವನ್ನು ರಚಿಸಿ, ಉಪ ನಿರೀಕ್ಷಕರವಾದ ಹರೀಶ್ ಹೆಚ್ ವಿ, ಎಎಸ್ಐ ವಿನಯ್ ಕುಮಾರ್ ಎ ಎಸ್ ಐ ಉಲ್ಲಾಸ್ ಮಹಾಲೆ ಪೊಲೀಸ್ ಸಿಬಂದಿಗಳಾದ ಗಿರೀಶ್ ,ಭಾಸ್ಕರ್ ,ಅಭಿಷೇಕ್ , ಪ್ರಜ್ವಲ್ ಅವರು ಕಾರ್ಯಾಚರಣೆ ನಡೆಸಿದ್ದರು.