Advertisement

Mangaluru; ಮಂಗಳಾ ಕಪ್‌ ಓಪನ್‌ ಬ್ಯಾಡ್ಮಿಂಟನ್‌ ಕೂಟಕ್ಕೆ ಚಾಲನೆ

12:25 AM May 11, 2024 | Team Udayavani |

ಮಂಗಳೂರು: ಕ್ರೀಡಾ ಕೂಟಗಳು ಪ್ರತಿಭೆಗಳ ಸಾಮರ್ಥ್ಯ ವನ್ನು ಅಳೆಯಲು ಸಹಕಾರಿ ಯಾಗು ತ್ತದೆ. ಮಂಗಳಾ ಕಪ್‌ ಆಯೋ ಜನೆಯ ಮೂಲಕ ಬಹಳಷ್ಟು ಬ್ಯಾಡ್ಮಿಂಟನ್‌ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿದಂತಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್‌ ಡಿ’ಸೋಜಾ ಹೇಳಿದರು.

Advertisement

ಮಂಗಳಾ ಬ್ಯಾಡ್ಮಿಂಟನ್‌ ಅಸೋಸಿ ಯೇಶನ್‌ ವತಿಯಿಂದ ನಗರದ ಯು.ಎಸ್‌. ಮಲ್ಯ ಒಳಾಂಗಣ ಕ್ರೀಡಾಂ  ಗಣ ದಲ್ಲಿ ಶುಕ್ರ ವಾರ ದಿಂದ ಆರಂಭ  ವಾದ “ಮಂಗಳಾ ಕಪ್‌ 2024′ ರಾಷ್ಟ್ರಮಟ್ಟದ ಓಪನ್‌ ಬ್ಯಾಡ್ಮಿಂಟನ್‌ ಕೂಟವನ್ನು ಅವರು ಉದ್ಘಾಟಿಸಿದರು.

ಅಂತಾರಾಷ್ಟ್ರೀಯ ಮೋಟಾರ್‌ ರೇಸ್‌ ಪಟು ಅಶ್ವಿ‌ನ್‌ ನಾಯಕ್‌ ಮಾತ ನಾಡಿ, ಆರೋಗ್ಯಪೂರ್ಣ ಬದುಕಿಗೆ ಕ್ರೀಡೆ ಸಹಕಾರಿ. ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ವಹಿಸಿ ಮುನ್ನಡೆದರೆ ಅವರಿಗೆ ಉತ್ತಮ ಭವಿಷ್ಯವಿದೆ ಎಂದರು. ಮನಪಾ ಸದಸ್ಯೆ ಸಂಧ್ಯಾ ಮೋಹನ್‌ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಸುಪ್ರೀತ್‌ ಆಳ್ವ, ಕಾರ್ಯದರ್ಶಿ ದೀಪಕ್‌ ಕುಮಾರ್‌, ಪ್ರಮುಖರಾದ ಮುಖ್ಯ ತೀರ್ಪುಗಾರ ಸುರೇಶ್‌, ವೀಣಾ ಸುರೇಶ್‌ ಮುಂತಾ ದವರು ಇದ್ದರು.

ಈ ಪಂದ್ಯಾಟದಲ್ಲಿ ಮಿಕ್ಸೆಡ್‌ ಡಬಲ್ಸ್‌, ಪುರುಷರ ಮತ್ತು ಮಹಿಳೆ ಯರ ಸಿಂಗಲ್ಸ್‌, ಡಬಲ್ಸ್‌, 20, 40 ವರ್ಷ ಮೇಲ್ಪಟ್ಟ ಪುರುಷರ ಡಬಲ್ಸ್‌, 30 ವರ್ಷ ಮೇಲ್ಪಟ್ಟ ಮಹಿಳೆಯರ ಮುಕ್ತ ಪಂದ್ಯಾಟ ನಡೆಯ ಲಿದ್ದು, ಒಟ್ಟು ಬಹುಮಾನದ ಮೊತ್ತ 5,83,000 ರೂ. ಎಂದು ನಿಗದಿ ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next