Advertisement

Mangaluru ಅತಿಥಿ ಉಪನ್ಯಾಸಕರ ನೇಮಕಕ್ಕೆ ಆಗ್ರಹ

12:24 AM Aug 21, 2024 | Team Udayavani |

ಮಂಗಳೂರು: ಉಭಯ ಜಿಲ್ಲೆಗಳ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈ ವರ್ಷದ ಶೈಕ್ಷಣಿಕ ತರಗತಿಗಳು ಆ. 12ರಂದು ಆರಂಭಗೊಂಡಿದ್ದು, ಈವರೆಗೆ ಅತಿಥಿ ಉಪನ್ಯಾಸಕರನ್ನು ಕರ್ತವ್ಯಕ್ಕೆ ನಿಯೋಜಿಸಿಲ್ಲ. ಇದರಿಂದಾಗಿ ವಿದ್ಯಾ ರ್ಥಿಗಳ ಪಾಠ ಪ್ರವಚನಕ್ಕೆ ಸಮಸ್ಯೆ ಉಂಟಾಗಿದೆ. ಸರಕಾರ ತತ್‌ಕ್ಷಣ ಅತಿಥಿ ಉಪನ್ಯಾಸಕರನ್ನು ನೇಮಿಸಬೇಕು ಎಂದು ದ.ಕ. ಮತ್ತು ಉಡುಪಿ ಜಿಲ್ಲೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಆಗ್ರಹಿಸಿದೆ.

Advertisement

ಸಂಘದ ದ.ಕ. ಜಿಲ್ಲಾಧ್ಯಕ್ಷ ಮನ ಮೋಹನ ಬಳ್ಳಡ್ಕ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತಿಥಿ ಉಪನ್ಯಾಸಕರು ಉದ್ಯೋ ಗವಿಲ್ಲದೆ, ಇತ್ತ ಕುಟುಂಬವನ್ನೂ ನಿಭಾಯಿಸಲಾಗದ ಪರಿಸ್ಥಿತಿ ನಿರ್ಮಾ ಣವಾಗಿದೆ. ಹಾಗಾಗಿ ಈ ಹಿಂದೆ ಕರ್ತ ವ್ಯ ನಿರ್ವಹಿಸುತ್ತಿದ್ದವರನ್ನು ಅದೇ ಕಾಲೇ ಜಿನಲ್ಲಿ ಮುಂದುವರಿಸಬೇಕು ಎಂದರು.

ಈ ಸಾಲಿನಲ್ಲಿ ಹಲವು ಕಾಲೇಜು ಗಳಲ್ಲಿ ವಿದ್ಯಾರ್ಥಿಗಳ ಕೊರತೆೆಯಿಂದ ಕೆಲವು ವಿಭಾಗಗಳು ಮುಚ್ಚುವ ಪರಿಸ್ಥಿತಿ
ಇದೆ. ಜತೆಗೆ 15ಕ್ಕಿಂತ ಕಡಿಮೆ ವಿದ್ಯಾ ರ್ಥಿಗಳು ಇದ್ದರೆ ಅಂಥ ವಿಭಾಗಗಳನ್ನು ಸ್ಥಳೀಯ ಕಾಲೇಜುಗಳಿಗೆ ವರ್ಗಾಯಿ ಸುವಂತೆ ಸೂಚಿಸಲಾಗಿದೆ. ಇದರಿಂದ ಅನೇಕ ಅತಿಥಿ ಉಪನ್ಯಾಸಕರು ಹುದ್ದೆ ಕಳೆದು ಕೊಳ್ಳಲಿದ್ದು, ಈ ಸಮಸ್ಯೆ ಬಗೆಹರಿ ಸುವಂತೆ ಸ್ಪೀಕರ್‌ ಯು.ಟಿ. ಖಾದರ್‌, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ಶಾಸಕರಾದ ಅಶೋಕ್‌ ಕುಮಾರ್‌ ರೈ, ಐವನ್‌ ಡಿ’ಸೋ ಜಾ ಅವರಿಗೆ ಮನವಿ ಸಲ್ಲಿಸಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದರು.

ಸಂಘ ದ ಉಪಾಧ್ಯಕ್ಷೆ ರೇಶ್ಮಾ ಕೆ.ಎಸ್‌., ಕೋಶಾಧಿಕಾರಿ ರಂಜಿತ್‌ ಪಿ.ಜೆ. ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next