Advertisement

ಶ್ರಮದಾನದಡಿ ಮಳೆಕೊಯ್ಲು ಅಳವಡಿಸಿ ಮಾದರಿಯಾದ ಸಿಎಸ್‌ಐ ಚರ್ಚ್‌

12:45 PM Aug 10, 2019 | Naveen |

ಮಹಾನಗರ: ‘ಉದಯವಾಣಿ’ಯ ‘ಮನೆಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಣೆಗೊಂಡ ಇನ್ನಷ್ಟು ಮಂದಿ ತಮ್ಮ ಮನೆಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಂಡಿದ್ದಾರೆ. ಮನೆ, ಸಂಘ ಸಂಸ್ಥೆಗಳು ಮಾತ್ರವಲ್ಲದೆ, ಧಾರ್ಮಿಕ ಕೇಂದ್ರಗಳಲ್ಲಿಯೂ ಮಳೆಕೊಯ್ಲು ಮೂಲಕ ನೀರುಳಿತಾಯಕ್ಕೆ ಧನಾತ್ಮಕ ಹೆಜ್ಜೆ ಇಡುತ್ತಿರುವುದು ಜೀವಜಲದ ಉಳಿತಾಯಕ್ಕೆ ಹೊಸ ಮುನ್ನುಡಿಯಾಗಿದೆ.

Advertisement

ಎಂಆರ್‌ಪಿಎಲ್ ಉದ್ಯೋಗಿ ಅಶೋಕ್‌ಕುಮಾರ್‌ ಹೆಗ್ಡೆ ಅವರು ಕಾರ್ಕಳ ಕಡ್ತಲ ಗ್ರಾಮದಲ್ಲಿರುವ ತಮ್ಮ ಮನೆಯ ಬಾವಿಗೆ ಮಳೆಕೊಯ್ಲು ಅಳವಡಿಸಿಕೊಂಡಿದ್ದಾರೆ.

ಛಾವಣಿ ನೀರು ಬಾವಿಗೆ
ಮೂಡುಬಿದಿರೆಯ ಬಡಗ ಮಿಜಾರ್‌ ಮರಕಡ ಕ್ರಾಸ್‌ ನಿವಾಸಿ ಕಮಲಾಕ್ಷ ಶೆಟ್ಟಿ ಅವರ ಮನೆಯ ಬಾವಿಗೆ ಮಳೆಕೊಯ್ಲು ಅಳವಡಿಕೆ ಮಾಡಲಾಗಿದೆ.

ಅಂದಾಜು 12 ಸಾವಿರ ರೂ. ವೆಚ್ಚದಲ್ಲಿ ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಛಾವಣಿ ನೀರನ್ನು ಪೈಪ್‌ ಮುಖಾಂತರ ಟ್ಯಾಂಕ್‌ಗೆಬಿಟ್ಟು ಶುದ್ಧೀಕೃತ ನೀರನ್ನು ಬಾವಿಗೆ ಬೀಳುವಂತೆ ನೋಡಿಕೊಳ್ಳಲಾಗಿದೆ. ಕಮಲಾಕ್ಷ ಅವರಿಂದ ಪ್ರೇರಣೆಗೊಂಡು ಪಕ್ಕದ ಮನೆಯವರೂ ಮಳೆಕೊಯ್ಲು ಅಳವಡಿಸಿಕೊಂಡಿದ್ದಾರೆ.

‘ಉದಯವಾಣಿ’ ಮಳೆಕೊಯ್ಲು ಬಗ್ಗೆ ಪ್ರಕಟಿಸುತ್ತಿರುವ ಮಾಹಿತಿಯುಕ್ತ ಲೇಖನಗಳಿಂದ ಪ್ರೇರಿತನಾಗಿ ಮನೆಯಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಂಡಿದ್ದೇನೆ. ಭವಿಷ್ಯದಲ್ಲಿ ನೀರಿನ ಸಮಸ್ಯೆ ಉಂಟಾಗದು ಎಂಬ ಭರವಸೆ ಇದೆ ಎನ್ನುತ್ತಾರೆ ಕಮಲಾಕ್ಷ ಶೆಟ್ಟಿ.

Advertisement

ಸಿಎಸ್‌ಐ ಚರ್ಚ್‌ನಲ್ಲಿ ಜಲ ಸಂರಕ್ಷಣೆ

ಈ ಬೇಸಗೆಯಲ್ಲಿ ಉಂಟಾದ ನೀರಿನ ಬವಣೆ ಮುಂದಿನ ದಿನಗಳಲ್ಲಿ ಆಗದಿರಲಿ ಎಂಬ ಸದಾಶಯದೊಂದಿಗೆ ಬೊಕ್ಕಪಟ್ಣದ ಸಿಎಸ್‌ಐ ವಿಶ್ರಾಂತಿ ದೇವಾಲಯದ ಸದಸ್ಯರು ದೇವಾಲಯದ ಆವರಣದಲ್ಲಿರುವ ಬಾವಿಗೆ ಮಳೆಕೊಯ್ಲು ಅಳವಡಿಸಿದ್ದಾರೆ. ಸ್ಯಾಮುವೆಲ್ ಜಾನ್‌ ಲೀ ಕರ್ಕಡ, ಜೋಶಿ ಜನಾಸ್‌, ಜೋಯಲ್ ಕರ್ಕಡ, ಸಂದೀಪ್‌ ಕೈರನ್ನ ಅವರು ಶ್ರಮದಾನದ ಮೂಲಕ ಒಂದು ವಾರದಲ್ಲಿ ಮಳೆಕೊಯ್ಲು ಅಳವಡಿಕೆ ಮಾಡಿದ್ದಾರೆ. ಸಭಾ ಪಾಲಕರಾದ ರೆ| ವಿಲಿಯಂ ಕುಂದರ್‌, ಗೊಡ್ವಿನ್‌ ಕಾರ್ಯಪ್ಪ ಅವರ ಪ್ರೋತ್ಸಾಹ ಮತ್ತು ಉತ್ಸಾಹಿ ಕುಟುಂಬಗಳ ಧನಸಹಾಯ ನೀಡಿರುವುದರಿಂದ ಇದು ಸಾಧ್ಯವಾಗಿದೆ. ‘ಉದಯವಾಣಿ ಮಳೆಕೊಯ್ಲು ಅಭಿಯಾನವೇ ನಮಗೆ ಪ್ರೇರಣೆಯಾಯಿತು’ ಎಂದು ಸಿಎಸ್‌ಐ ವಿಶ್ರಾಂತಿ ಸಭೆಯ ಸದಸ್ಯರು ತಿಳಿಸಿದ್ದಾರೆ.

ಅಭಿಯಾನವೇ ಪ್ರೇರಣೆ

ಉದಯವಾಣಿ ಸುದಿನದ ಮನೆ ಮನೆಗೆ ಮಳೆಕೊಯ್ಲು ಅಭಿಯಾನ ಯಶಸ್ಸು ಕಂಡಿದ್ದು, ಇದರಿಂದ ಪ್ರೇರಿತರಾಗಿ ಹೆಚ್ಚಿನ ಮಂದಿ ತಮ್ಮ ಮನೆಯಲ್ಲಿ ಮಳೆಕೊಯ್ಲು ಅಳವಡಿಸಿದ್ದಾರೆ.ಇದಕ್ಕೆ ಸರಕಾರ ಕೂಡ ಪ್ರೋತ್ಸಾಹ ನೀಡಬೇಕಿದೆ. ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಬಾವಿಗೂ ಮಳೆಕೊಯ್ಲು ಅಳವಡಿಸಬೇಕು. ನಾವು ಕೂಡ ಮಳೆಕೊಯ್ಲು ಅಳವಡಿಸಿದ್ದು ನಮಗೆ ‘ಉದಯವಾಣಿ’ ಅಭಿಯಾನವೇ ಪ್ರೇರಣೆ.
ಮೇಘನಾ ಆಚಾರ್ಯ,ವಾಮಂಜೂರು 
Advertisement

Udayavani is now on Telegram. Click here to join our channel and stay updated with the latest news.

Next