Advertisement
ಈ ವೇಳೆ ಮಾತನಾಡಿದ ಅವರು, ಜನರ ಬೇಡಿಕೆಗೆ ಅನುಗುಣವಾಗಿ ಕೆಎಸ್ಸಾರ್ಟಿಸಿ ಮಹತ್ವದ ಹೆಜ್ಜೆ ಇರಿಸಿದೆ. ಕಾಸರಗೋಡು ಮಂಗಳೂರಿನ ಗಡಿ ಪ್ರದೇಶವಾದ ಕಾರಣ ಅಲ್ಲಿನ ವ್ಯಾಪಾರ, ವಹಿವಾಟುಗಳಿಗೆ ಇದರಿಂದ ಉಪಯೋಗ ವಾಗಲಿದೆ. ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗ ದಿಂದ ಮಂಜೇಶ್ವರ, ಗೋವಾಕ್ಕೆ ಬಸ್‌ಗಳ ಬೇಡಿಕೆ ಇದ್ದು, ಅಧಿಕಾರಿಗಳು ಗಮನಹರಿಸಬೇಕು ಎಂದರು.
ಮಂಗಳೂರಿನಿಂದ ಕಾಸರಗೋಡಿಗೆ ಮೊದಲ ಹಂತದಲ್ಲಿ 2 ಎ.ಸಿ. ವೋಲ್ವೋ
ಬಸ್ ಸಂಚರಿಸಲಿವೆ ಎಂದರು.
Related Articles
Advertisement
ಮಂಗಳೂರು-ಕಾಸರಗೋಡು ಪಾಸ್ ಸೌಲಭ್ಯಮಂಗಳೂರಿನಿಂದ ಕಾಸರಗೋಡಿಗೆ ಕೇವಲ ಆರು ನಿಲುಗಡೆಯೊಂದಿಗೆ ಎರಡೂ ವಿಭಾಗದಿಂದ ಪ್ರತೀ ದಿನ 14 ಟ್ರಿಪ್ ಎ.ಸಿ. ವೋಲ್ವೋ ಬಸ್ ಸಂಚರಿಸಲಿದ್ದು, ಪ್ರಯಾಣಿಕರೊಬ್ಬರಿಗೆ 75 ರೂ. ದರ ನಿಗದಿಪಡಿಸಲಾಗಿದೆ. ದಿನದ ಪಾಸಿಗೆ 130 ರೂ. ದರ ನಿಗದಿಪಡಿಸಲಾಗಿದ್ದು, ದಿನದಲ್ಲಿ ಎರಡು ಬಾರಿ ಪ್ರಯಾಣ ಮಾಡಬಹುದಾಗಿದೆ. ವೋಲ್ವೋ ವೇಳಾಪಟ್ಟಿ
ಮಂಗಳೂರಿನಿಂದ ಬೆಳಗ್ಗೆ 7.00, 7.30, 7.45, 8.00, 10.00, 10.30, 10.45, 11.15, 2, 2.30, 2.45, 3.15, 6.00, 6.30
ಕಾಸರಗೋಡಿನಿಂದ ಬೆಳಗ್ಗೆ 5.30, 5.55, 8.30, 9.00, 9.15, 9.45, 12.00, 12.30, 1.00, 1.30, 4.15, 4.45, 5.15, 5.30