Advertisement

ಮಂಗಳೂರು: ಪರಿಣಾಮಕಾರಿಯಾಗಿ ಜಾರಿಯಾದ ಅಪರಾಧ ಕೃತ್ಯ ಪತ್ತೆ ಹಚ್ಚುವ ಬೆರಳಚ್ಚು ತಂತ್ರಜ್ಞಾನ

12:30 PM Feb 19, 2023 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಜರುಗಬಹುದಾದ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ನೂತನ MCCTNS (Mobile Crime and Criminal Tracking Network System) ಪೋರ್ಟಬಲ್ ಸ್ಕ್ಯಾನರ್ ಬಳಕೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ.

Advertisement

ಇದರ ಮೂಲಕ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ  ಅಧಿಕಾರಿ/ಸಿಬ್ಬಂದಿಗಳು ರಾತ್ರಿ ಗಸ್ತು ಕರ್ತವ್ಯದ ವೇಳೆಯಲ್ಲಿ ಕಾಣಸಿಗುವ ಅಪರಿಚಿತ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಅಪರಾಧ ಹಿನ್ನೆಲೆಗಳ ಬಗ್ಗೆ ಈ ಹಿಂದೆ ನಡೆಸುತ್ತಿದ್ದ ಮೌಖಿಕ ವಿಚಾರಣೆಯ ಜೊತೆಗೆ, ಈ ನೂತನ ತಂತ್ರಜ್ಞಾನದಲ್ಲಿ ಯಾವುದೇ ವ್ಯಕ್ತಿಯು ಈ ಹಿಂದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ ಆತನ ಬೆರಳಚ್ಚುಗಳನ್ನು ಈ ತಂತ್ರಾಂಶದ ಮೂಲಕ ಪರಿಶೀಲಿಸಿದಾಗ ಆತನ ಅಪರಾಧ ಹಿನ್ನೆಲೆಗಳ ಮಾಹಿತಿ ಕ್ಷಣಮಾತ್ರದಲ್ಲಿ ಅದೇ ಸ್ಥಳದಲ್ಲಿ ಪಡೆಯಬಹುದಾಗಿದೆ.

ಇಂತಹ ನೂತನ ತಂತ್ರಜ್ಞಾನವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಬಳಸುತ್ತಿರುವುದರಿಂದ ಅಪರಾಧ ಹಿನ್ನೆಲೆಯ ವ್ಯಕ್ತಿಗಳನ್ನು ತಕ್ಷಣ ಪತ್ತೆ ಹಚ್ಚಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಸಾರ್ವಜನಿಕರು ಈ ಪ್ರಕ್ರಿಯೆಗೆ ಸಹಕಾರ ನೀಡಬೇಕೆಂದು ಜಿಲ್ಲಾ ಪೊಲೀಸ್ ಘಟಕ ತಿಳಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next