Advertisement

ಮಂಗಳೂರು: ಅನುಮತಿ ಪಡೆಯದೇ ವಿದೇಶ ಪ್ರಯಾಣ; ಪೊಲೀಸ್ ಅಧಿಕಾರಿ ಸಸ್ಪೆಂಡ್

10:24 AM Mar 23, 2022 | Team Udayavani |

ಮಂಗಳೂರು: ಅಧಿಕಾರಿಗಳಿಗೆ ತಿಳಿಸದೆ ವೈಯಕ್ತಿಕ ವಿದೇಶಿ ಪ್ರವಾಸ ಮಾಡಿದ್ದ ಕಾರಣಕ್ಕೆ ಸಂಚಾರಿ ಪೊಲೀಸ್ ಇಲಾಖೆಗೆ ಸೇರಿದ ಇನ್ಸ್‌ಪೆಕ್ಟರ್ ಒಬ್ಬರನ್ನು ಸೋಮವಾರ ಇಲಾಖೆ ಅಮಾನತುಗೊಳಿಸಲಾಗಿದೆ.

Advertisement

ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮೊಹಮ್ಮದ್ ಶರೀಫ್ ಅವರನ್ನು ಅಮಾನತುಗೊಳಿಸಿ ಮಂಗಳೂರು ಪೊಲೀಸ್ ಆಯುಕ್ತ ಎನ್.  ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.

ಮಾರ್ಚ್ 16 ರಂದು ಇನ್ಸ್‌ಪೆಕ್ಟರ್ ಶರೀಫ್ ಅರ್ಜಿ ಸಲ್ಲಿಸಿ ಅಜ್ಮೀರ್‌ಗೆ ಆರಂಭಿಕ ಪ್ರವಾಸ ಕೈಗೊಂಡು ನಂತರ, ಅವರು ಡಿಜಿಪಿಯ ಒಪ್ಪಿಗೆಯಿಲ್ಲದೆ ದುಬೈಗೆ ಹೋಗಿದ್ದರು.

ಸೋಮವಾರ ದುಬೈನಿಂದ ಮಂಗಳೂರಿಗೆ ಇನ್ಸ್‌ಪೆಕ್ಟರ್ ಶರೀಫ್ ಆಗಮಿಸಿದ, ವಿಷಯ ಬೆಳಕಿಗೆ ಬಂದಿದ್ದು, ಮುಂದಿನ ಆದೇಶದವರೆಗೆ ಅವರನ್ನು ಅಮಾನತುಗೊಳಿಸಲಾಗಿದೆ.

ನಿಯಮಗಳ ಪ್ರಕಾರ, ಪೊಲೀಸ್ ಅಧಿಕಾರಿಗಳು ವಿದೇಶಿ ಭೇಟಿಗೆ ಹೋದರೆ ಉನ್ನತ ಅಧಿಕಾರಿಗಳಿಗೆ ತಿಳಿಸಬೇಕಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next