Advertisement

Mangaluru; ಖಾಯಂ ಉದ್ಯೋಗ ಕೇಂದ್ರ ಪೆಟ್ರೋಲಿಯಂ ಸಚಿವರ ಭರವಸೆ

12:16 AM Feb 19, 2024 | Team Udayavani |

ಮಂಗಳೂರು: ಹೊಸದಿಲ್ಲಿಯಲ್ಲಿ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್‌ ಪುರಿ ಅವರನ್ನು ಸಂಸದ ನಳಿನ್‌ ಕುಮಾರ್‌ ಕಟೀಲು ಭೇಟಿಯಾದರು.

Advertisement

ಮಂಗಳೂರಿನ ಜಿಎಂಪಿಎಲ್‌ ಕಂಪೆನಿಯಲ್ಲಿ ಹಿಂದಿನ ಜೆಬಿಎಫ್‌ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದವರಿಗೆ ನೇರವಾಗಿ ಖಾಯಂ ಉದ್ಯೋಗ ನೀಡುವಂತೆ ಮನವಿ ಸಲ್ಲಿಸಿ, ಜೆಬಿಎಫ್‌ ಉದ್ಯೋಗಿಗಳ ಬೇಡಿಕೆಯನ್ನು ಸಚಿವರಿಗೆ ಮನವರಿಕೆ ಮಾಡಿದರು.

ಸ್ಪಂದಿಸಿದ ಸಚಿವರು, ಶೀಘ್ರದಲ್ಲಿಯೇ ಸಕಾರಾತ್ಮಕ ನಿರ್ಣಯ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಶಾಸಕರಾದ ಉಮಾನಾಥ್‌ ಕೋಟ್ಯಾನ್‌ ಹಾಗೂ ರಾಜೇಶ್‌ ನಾಯ್ಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next