Advertisement

Mangaluru”ಪಾರ್ಟ್‌ ಟೈಮ್‌ ಜಾಬ್‌’ ಆಮಿಷ: 6.32 ಲಕ್ಷ ರೂ. ವಂಚನೆ

11:05 PM Sep 22, 2023 | Team Udayavani |

ಮಂಗಳೂರು: ಇನ್‌ಸ್ಟಾಗ್ರಾಂ ಖಾತೆಗೆ ಪಾರ್ಟ್‌ಟೈಮ್‌ ಜಾಬ್‌ ಬಗ್ಗೆ ಸಂದೇಶ ಕಳುಹಿಸಿ ಅನಂತರ 6.32 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ದೂರುದಾರರ ಇನ್‌ಸ್ಟಾಗ್ರಾಂ ಖಾತೆಗೆ ಸೆ. 9ರಂದು ಅಪರಿಚಿತ ಕಂಪೆನಿಯ ಹೆಸರಿನಲ್ಲಿ ಒಂದು ಜಾಹೀರಾತು ಬಂದಿತ್ತು. ಅದರಲ್ಲಿದ್ದ ಲಿಂಕ್‌ ಅನ್ನು ಒತ್ತಿದಾಗ ಪ್ರತೀದಿನ ಹಣ ತೊಡಗಿಸಿ ಟಾಸ್ಕ್ ಪೂರ್ಣಗೊಳಿಸಿ ಹಣ ಗಳಿಸುವ ಬಗ್ಗೆ ತಿಳಿಸಲಾಗಿತ್ತು. ಅದರಂತೆ ಮೊದಲು ತೆರಿಗೆ ಮೊತ್ತ ಪಾವತಿಸುವಂತೆ ಸೂಚಿಸಲಾಗಿತ್ತು. ಇದನ್ನು ನಂಬಿದ ದೂರುದಾರರು ಹಂತ ಹಂತವಾಗಿ 1,66,348 ರೂ. ವರ್ಗಾಯಿಸಿದ್ದರು. ಸೆ. 10ರಂದು 1,000 ರೂ. ವರ್ಗಾಯಿಸಿದ್ದರು. ಬಳಿಕ ಹಂತ-ಹಂತವಾಗಿ ಸೆ. 18ರ ವರೆಗೆ ಒಟ್ಟು 6,32,218 ರೂ. ವರ್ಗಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next