Advertisement
ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕೇಂದ್ರ ಗಳು, ವಾಣಿಜ್ಯ ಕಟ್ಟಡಗಳು, ಅಂಗಡಿ – ಮಳಿಗೆಗಳು, ವಸತಿ ಸಮುಚ್ಚಯಗಳ ಸಹಿತ ಹಲವು ಕಚೇರಿ ಸಂಸ್ಥೆಗಳು ಈ ರಸ್ತೆಯುದ್ದಕ್ಕೂ ಇವೆ. ನಿತ್ಯ ಸಾವಿರಾರು ಮಂದಿ ಈ ರಸ್ತೆಯಲ್ಲಿ ಸಾಗುತ್ತಾರೆ. ರಸ್ತೆಯೂ ಅಗಲಗೊಂಡಿದ್ದು, ಕೆಲವು ಕಡೆ ಮಾತ್ರ ಫುಟ್ ಪಾತ್ ಇದೆ. ಕೆಲವೊಂದು ಮೂಲಸೌಕರ್ಯಗಳ ಕೊರತೆ ಸಾರ್ವಜನಿಕರನ್ನು ಇನ್ನೂ ಕಾಡುತ್ತಿದೆ.
ಸುಮಾರು ಒಂದೂವರೆ ಕಿ.ಮೀ. ಚತುಷ್ಪಥ ರಸ್ತೆಯಲ್ಲಿ ನಂದಿಗುಡ್ಡದಿಂದ ವೆಲೆನ್ಸಿಯಾ ಕಡೆಗೆ ಬರುವ ರಸ್ತೆಯಲ್ಲಿ ಒಂದು ಬಸ್ ತಂಗುದಾಣ ಇದೆ. ಅದನ್ನು ನವೀಕರಿಸಲಾಗಿದೆ. ರಸ್ತೆಯ ಇನ್ನೊಂದು ಬದಿಯಲ್ಲಿ ವೆಲೆನ್ಸಿಯಾದಿಂದ ನಂದಿ ಗುಡ್ಡೆ ವರೆಗೆ ಯಾವುದೇ ಬಸ್ ತಂಗು ದಾಣಗಳಿಲ್ಲ. ಇದರಿಂದಾಗಿ ಬಸ್ಸಿಗಾಗಿ ಕಾಯುವವರು ರಸ್ತೆಯಲ್ಲಿರುವ ಅಂಗಡಿಗಳ ಮುಂಭಾಗದಲ್ಲಿ ಅಥವಾ ಫುಟ್‌ಪಾತ್‌ನಲ್ಲಿ ನಿಂತು ಬಸ್ಸಿಗೆ ಕಾಯಬೇಕಾದ ಅಗತ್ಯವಿದೆ. ಸ್ಥಳೀಯ ಶಾಲೆಗಳ ಮಕ್ಕಳು ಕೂಡಾ ಮಳೆ – ಬಿಸಿಲಿಗೆ ರಸ್ತೆ ಬದಿಯಲ್ಲೇ ನಿಲ್ಲಬೇಕಾದ ಅನಿವಾರ್ಯಯಿದೆ. ರಸ್ತೆ ವಿಸ್ತರಣೆ ಕಾಮಗಾರಿಯ ಸಂದರ್ಭ ಬಸ್ ತಂಗುದಾಣಗಳನ್ನು ತೆರವು ಗೊಳಿಸಲಾ ಗಿದ್ದು, ಬಳಿಕ ಹೊಸದಾಗಿ ನಿರ್ಮಿಸಲಾಗಿಲ್ಲ. ಕನಿಷ್ಠ 2-3 ಬಸ್ ತಂಗುದಾಣಗಳನ್ನು ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Related Articles
ರಸ್ತೆ ಬದಿಯಲ್ಲಿ ಪಾರ್ಕಿಂಗ್‌ಗೆ ಎಂದು ಪ್ರತ್ಯೇಕ ಸ್ಥಳವನ್ನು ಮೀಸಲಿಟ್ಟಿಲ್ಲ. ಇದರಿಂದಾಗಿ ಕೆಲವೊಮ್ಮೆ ರಸ್ತೆಬದಿಯಲ್ಲಿ ಉದ್ದಕ್ಕೂ ವಾಹನಗಳ ಪಾರ್ಕಿಂಗ್ ಮಾಡುವುದು ಕಂಡು ಬರುತ್ತದೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ಇತರ ವಾಹನಗಳಿಗೂ ಅಡ್ಡಿಯಾಗುತ್ತಿದೆ. ಒಂದೆರಡು ಕಡೆಗಳಲ್ಲಿ ಪಾರ್ಕಿಂಗ್‌ಗೆಂದೇ ಸ್ಥಳಗಳನ್ನು ಮೀಸಲಿಡಬೇಕು ಎನ್ನುವುದು ವಾಹನ ಸವಾರರ ಬೇಡಿಕೆ. ಸಂಜೆ ವೇಳೆ ಫಾಸ್ಟ್ ಫುಡ್ ವಾಹನಗಳನ್ನು ರಸ್ತೆ ಬದಿಯಲ್ಲಿ ತಂದು ನಿಲ್ಲಿಸುವುದರಿಂದಲೂ ವಾಹನ ದಟ್ಟಣೆ ಉಂಟಾಗುತ್ತಿದೆ.
Advertisement
100 ಮೀ. ಫುಟ್‌ಪಾತ್ ನಿರ್ಮಾಣ ಬಾಕಿಇಲ್ಲಿನ ಸೈಂಟ್ ಜೋಸೆಫ್ ನಗರದ ಬಳಿಯಿಂದ ನಂದಿಗುಡ್ಡೆ ವೃತ್ತದ ವರೆಗೆ ಒಂದು ಬದಿಯಲ್ಲಿ ಫುಟ್‌ಪಾತ್ ನಿರ್ಮಾಣ ಮಾಡಲೂ ಬಾಕಿ ಇದೆ. ಸುಮಾರು 100 ಮೀ. ಗಳಷ್ಟು ದೂರ ರಸ್ತೆ ಬದಿಯಲ್ಲಿರುವ ಕಿರಿದಾದ ಜಾಗದಲ್ಲೇ ಪಾದಚಾರಿಗಳು ನಡೆಯದುಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ. ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಇಲ್ಲಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ವೆಲೆನ್ಸಿಯ ರಸ್ತೆಯನ್ನು ಅಭಿವೃದ್ಧಿ ಮಾಡಿದ್ದಾರೆ. ಆದರೆ ಕೆಲವೊಂದು ಮೂಲಸೌಕರ್ಯ ಗಳನ್ನು ಕಲ್ಪಿಸಬೇಕಾಗಿದೆ. ಬಸ್ ತಂಗುದಾಣ, ಕುಡಿಯುವ ನೀರಿನ ವ್ಯವಸ್ಥೆಗಳನ್ನು ಕಲ್ಪಿಸಬೇಕು. ವಾಹನಗಳ ಪಾರ್ಕಿಂಗ್‌ಗಾಗಿಯೂ ಸೂಕ್ತ ಸ್ಥಳ ನಿಗದಿಪಡಿಸಬೇಕು.
– ಸ್ಟೀವನ್ ಸಿಕ್ವೇರಾ, ಸ್ಥಳೀಯರು -ಭರತ್ ಶೆಟ್ಟಿಗಾರ್