Advertisement

Mangaluru ಪಣಂಬೂರು ಬೀಚ್‌: ತೇಲುವ ಸೇತುವೆ

12:09 AM Dec 18, 2023 | Team Udayavani |

ಪಣಂಬೂರು: ಪಣಂಬೂರು ಬೀಚ್‌ನಲ್ಲಿ ರವಿವಾರದಿಂದ ತೇಲುವ ಸೇತುವೆ ಪ್ರವಾಸಿಗರಿಗೆ ಹೊಸ ಆಕರ್ಷಣೆ ಯಾಗಿದೆ. ಮಲ್ಪೆ ಬೀಚ್‌ ಬಳಿಕ ಇದೀಗ ದ.ಕ. ಬೀಚ್‌ನಲ್ಲಿ ಮೊದಲ ತೇಲುವ ಸೇತುವೆ ಇದಾಗಿದೆ.

Advertisement

ಸುಮಾರು 150 ಮೀಟರ್‌ ಉದ್ದವಿದ್ದು 50ಕ್ಕೂ ಮಿಕ್ಕಿ ಪ್ರವಾಸಿ ಗರು ಏಕಕಾಲಕ್ಕೆ ಸೇತುವೆಯ ತುದಿಯಲ್ಲಿ ನಿಂತು ಸೂರ್ಯಾಸ್ತಮಾನ ನೋಡಬಹುದು. ಬೃಹತ್‌ ಅಲೆಯ ನಡುವೆ ಸೇತುವೆಯಲ್ಲಿ ಪ್ರವಾಸಿಗರು ನಡೆದಾಡಿ ಸಂಭ್ರಮಿಸಿದರು.

ತೇಲುವ ಸೇತುವೆಯ ಉದ್ದಕ್ಕೂ ಒಟ್ಟು 12 ಮಂದಿ ಲೈಫ್‌ ಗಾರ್ಡ್ಸ್‌ ಪ್ರವಾಸಿಗರ ಸುರಕ್ಷತೆಗೆ ನೇಮಿಸ ಲಾಗಿದೆ. ಲೈಫ್‌ ಜಾಕೆಟ್‌ ಕಡ್ಡಾಯ ಮಾಡಲಾಗಿದೆ.

ಡಿ.27ರಂದು ಮನೋರಂಜನೆಯ ಆಧಿಕೃತ ಉದ್ಘಾಟನೆ ನಡೆಯಲಿದೆ. ಇಲ್ಲಿನ ಬೀಚ್‌ ಅನ್ನು ಸರಕಾರ ಮತ್ತು ಖಾಸಗೀ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next