Advertisement

Mangaluru ಪಾಲಕ್ಕಾಡ್‌ ವಿಭಾಗ: ರೈಲುಗಳ ಸೇವೆಯಲ್ಲಿ ವ್ಯತ್ಯಯ

12:07 AM Jan 17, 2024 | Team Udayavani |

ಮಂಗಳೂರು: ಪಾಲಕ್ಕಾಡ್‌ ವಿಭಾಗದ ವಿವಿಧೆಡೆ ಹಳಿ ನಿರ್ವಹಣೆ ಕಾಮಗಾರಿ ಹಿನ್ನೆಲೆಯಲ್ಲಿ ರೈಲು ಸೇವೆಯಲ್ಲಿ ವ್ಯತ್ಯಯವಾಗಲಿದೆ.

Advertisement

ಜ. 18ರಂದು ನಂ. 16605 ಮಂಗಳೂರು ಸೆಂಟ್ರಲ್‌ – ತಿರುವನಂತಪುರ ಸೆಂಟ್ರಲ್‌ ಎರ್ನಾಡ್‌ ಎಕ್ಸ್‌ಪ್ರೆಸ್‌ ರೈಲನ್ನು 1 ಗಂಟೆ 10 ನಿಮಿಷ ತಡೆಹಿಡಿಯಲಾಗುತ್ತದೆ. ನಂ. 16606 ತಿರುವನಂತಪುರ ಸೆಂಟ್ರಲ್‌ – ಮಂಗಳೂರು ಸೆಂಟ್ರಲ್‌ ಎರ್ನಾಡ್‌ ಎಕ್ಸ್‌ಪ್ರೆಸ್‌ ರೈಲನ್ನು 55 ನಿಮಿಷ, ನಂ. 16323 ಕೊಯಮತ್ತೂರು ಜಂಕ್ಷನ್‌ – ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌ ರೈಲನ್ನು 20 ನಿಮಿಷ, ನಂ. 12618 ಹಝರತ್‌ ನಿಜಾಮುದ್ದೀನ್‌ ಜಂಕ್ಷನ್‌ – ಎರ್ನಾಕುಲಂ ಜಂಕ್ಷನ್‌ ಮಂಗಳಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲನ್ನು 50 ನಿಮಿಷ ತಡೆಹಿಡಿಯಲಾಗುತ್ತದೆ.

ಜ. 19ರಂದು ವೆರಾವಲ್‌ – ತಿರುವನಂತ ಪುರ ಸೆಂಟ್ರಲ್‌ ಸಾಪ್ತಾಹಿಕ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲನ್ನು 1 ಗಂಟೆ, ನಂ. 16528 ಕಣ್ಣೂರು-ಯಶವಂತಪುರ ಜಂಕ್ಷನ್‌ ಎಕ್ಸ್‌ಪ್ರಸ್ಸನ್ನು 1 ಗಂಟೆ, ನಂ. 06024 ಕಣ್ಣೂರು – ಶೋರ್ನೂರು ಜಂಕ್ಷನ್‌ ಮೆಮು ವಿಶೇಷ ರೈಲನ್ನು ಒಂದು ಗಂಟೆ, ನಂ. 16856 ಮಂಗಳೂರು ಸೆಂಟ್ರಲ್‌-ಪುದುಚೇರಿ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ರೈಲನ್ನು 20 ನಿಮಿಷ, ನಂ. 12618 ಹಝರತ್‌ ನಿಜಾಮುದ್ದೀನ್‌ ಜಂಕ್ಷನ್‌- ಎರ್ನಾಕುಲಂ ಜಂಕ್ಷನ್‌ ಮಂಗಳಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್ಸನ್ನು 40 ನಿಮಿಷ ಮತ್ತು ನಂ. 22638 ಮಂಗಳೂರು ಸೆಂಟ್ರಲ್‌- ಡಾ| ಎಂಜಿಆರ್‌ ಚೆನ್ನೈ ಸೆಂಟ್ರಲ್‌ ವೆಸ್ಟ್‌ ಕೋಸ್ಟ್‌ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲನ್ನು ಮಾರ್ಗಮಧ್ಯದಲ್ಲಿ 20 ನಿಮಿಷ ತಡೆಹಿಡಿಯಲಾಗುತ್ತದೆ.

ಜ. 20ರಂದು ನಂ.16348 ಮಂಗಳೂರು ಸೆಂಟ್ರಲ್‌ – ತಿರುವನಂತಪುರ ಸೆಂಟ್ರಲ್‌ ಎಕ್ಸ್‌ಪ್ರೆಸ್‌ ಒಂದು ಗಂಟೆ ತಡವಾಗಿ ಪ್ರಯಾಣ ಆರಂಭಿಸಲಿದೆ. ನಂ. 16335 ಗಾಂಧಿಧಾಮ – ನಾಗರಕೋವಿಲ್‌ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ರೈಲನ್ನು 50 ನಿಮಿಷ, ನಂ.16528 ಕಣ್ಣೂರು-ಯಶವಂತಪುರ ಜಂಕ್ಷನ್‌ ಎಕ್ಸ್‌ ಪ್ರಸ್‌ 50 ನಿಮಿಷ, ನಂ. 22656 ಹಝರತ್‌ ನಿಜಾಮುದ್ದೀನ್‌ಜಂಕ್ಷನ್‌ – ಎರ್ನಾಕುಲಂ ಸಾಪ್ತಾಹಿಕ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲನ್ನು 20 ನಿಮಿಷ ತಡೆಹಿಡಿಯಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next