ಮಂಗಳೂರು: ಬಸ್ಸು ಓವರ್ ಟೇಕ್ ವಿಚಾರದಲ್ಲಿ ಗಲಾಟೆ ನಡೆದು ಒಂದು ಬಸ್ ನ ಕಂಡಕ್ಟರ್ ಗೆ ಮತ್ತೊಂದು ಬಸ್ ನ ಸಿಬ್ಬಂದಿಗಳು ಅವಾಚ್ಯ ಶಬ್ದಗಳಲ್ಲಿ ಬೈದು ಹಲ್ಲೆ ಮಾಡಿದ ಬಗ್ಗೆ ದೂರು ದಾಖಲಾಗಿದೆ. ಅ.10ರಂದು ಈ ಘಟನೆ ನಡೆದಿದೆ.
ಈ ಬಗ್ಗೆ ಖಾಸಗಿ ಬಸ್ ನ ನಿರ್ವಾಹಕ ಭುವನೇಶ್ವರ್ ಬಿ ವಿ ಎಂಬವರು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನಲ್ಲೇದೆ?: ಬೆಳಿಗ್ಗೆ ವಿಟ್ಲದಿಂದ ಮಂಗಳೂರಿಗೆ ಬರುವಾಗ ಬಿ.ಸಿ.ರೋಡ್ ನಲ್ಲಿ ಅವರ ಬಸ್ಸನ್ನು ಓವರ್ ಟೇಕ್ ಮಾಡಿದೆ ಎಂಬ ಉದ್ದೇಶದಿಂದ ಮಂಗಳೂರಿನ ಸ್ಟೇಟ್ ಬ್ಯಾಂಕ್ ನಿಂದ ವಿಟ್ಲಗೆ ವಾಪಾಸ್ ತೆರಳುತ್ತಿರುವ ಸಮಯ ಅಂದರೆ ಬೆಳಗ್ಗೆ 8.15 ಗಂಟೆಗೆ ಕಂಕನಾಡಿ ಸಿಗ್ನಲ್ ಬಳಿ ಮತ್ತೊಂದು ಖಾಸಗಿ ಬಸ್ಸಿನ ಚಾಲಕ ಸುರೇಶ್ ಮತ್ತು ಕಂಡಕ್ಟರ್ ರಾಕೇಶ್ ಏಕಾಏಕಿಯಾಗಿ ತಮ್ಮ ಬಸ್ಸನ್ನು ಅಡ್ಡಲಾಗಿಟ್ಟು ಬಸ್ಸಿನ ಒಳಗೆ ಬಂದು ಚಾಲಕ ಮತ್ತು ಬಸ್ಸಿನ ಡ್ರೈವರ್ ಗೆ ಆವಾಚ್ಯ ಶಬ್ದಗಳಿಂದ ಬೈದಿದ್ದಾರೆ.
ಅಲ್ಲದೆ ಕಬ್ಬಿಣದ ರಾಡ್ ನಿಂದ ಎಡಕೈ, ಬಲಕೈ, ಎಡಕಾಲಿಗೆ ಮತ್ತು ಕುತ್ತಿಗೆಗೆ ಹೊಡೆದು ಗಾಯಗೊಳಿಸಿದ್ದಾರೆ. ಇಬ್ಬರು ಸೇರಿ ನಿರ್ವಾಹಕರಿಗೆ ಕೈಯಿಂದ ಬೆನ್ನಿಗೆ ಹೊಡೆದು ಕಾಲಿನಿಂದ ತುಳಿದಿರುತ್ತಾರೆ. ಇನ್ನು ಮುಂದಕ್ಕೆ ತಮ್ಮ ಸುದ್ದಿಗೆ ಬಂದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹಲ್ಲೆಗೆ ಉಪಯೋಗಿಸಿದ ರಾಡನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.