Advertisement
ಮಂಗಳವಾರ ಸಂಜೆ ಪಂಪ್‌ವೆಲ್ ಬಳಿಯ ಜಪ್ಪು ಕುಡಾ³ಡಿಯಲ್ಲಿ ಶರಣ್‌ನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಫೈರಿಂಗ್‌ಗೆ ಮೊದಲು ಆರೋಪಿ ಚೂರಿಯಿಂದ ದಾಳಿ ನಡೆಸಿ ಹೆಡ್‌ಕಾನ್‌ಸ್ಟೆಬಲ್ ಓರ್ವರನ್ನು ಗಾಯಗೊಳಿಸಿದ್ದ. ಕೊಲೆ, ಕೊಲೆಯತ್ನ, ಅತ್ಯಾ ಚಾರ, ಸುಲಿಗೆ ಸೇರಿದಂತೆ 25ಕ್ಕೂ ಅಧಿಕ ಪ್ರಕರಣಗಳನ್ನು ಎದುರಿಸುತ್ತಿದ್ದ ಶರಣ್, 2011 ರಲ್ಲಿ ಕೆವಿಜಿ ಪಾಲಿಟೆಕ್ನಿಕ್‌ನ ಆಡಳಿತಾಧಿಕಾರಿ ರಾಮಕೃಷ್ಣ ಅವರ ಕೊಲೆ ಪ್ರಕರಣದಲ್ಲೂ ದೋಷಿಯಾಗಿದ್ದ. ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹಾಗಾಗಿ ಶಿಕ್ಷೆ ಪ್ರಕಟವಾಗಿರಲಿಲ್ಲ. ಈತನ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು. ಜ. 2ರಂದು ಈತನನ್ನು ಮೇರಿಹಿಲ್ ಬಳಿ ಪೊಲೀಸರು ಬಂಧಿಸಲು ಯತ್ನಿಸಿದಾಗ ಪೊಲೀಸ್ ವಾಹನಕ್ಕೆ ತನ್ನ ವಾಹನ ಢಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ.
ಶರಣ್‌ನ ಬಂಧನಕ್ಕೆ ಪೊಲೀಸರು 15 ದಿನಗಳಿಂದ ಪ್ರಯತ್ನಿಸುತ್ತಿದ್ದರು. ಸೋಮವಾರ ರಾತ್ರಿ ಮಲ್ಪೆಯ ಸರ್ವೀಸ್ ಅಪಾರ್ಟ್ ಮೆಂಟ್‌ನಲ್ಲಿ ಇದ್ದಾನೆಂಬ ಮಾಹಿತಿ ಲಭಿಸಿ ಪೊಲೀಸರು ಅಲ್ಲಿಗೆ ತೆರಳಿದ್ದರು. ಮಂಗಳವಾರ ಬೆಳಗ್ಗೆ ಆತ ಅಲ್ಲಿಂದಲೂ ಪರಾರಿಯಾಗಿದ್ದ. ಮಧ್ಯಾಹ್ನದ ವೇಳೆಗೆ ಆತ ಮಂಗಳೂರು ಕಡೆಗೆ ಹೋಗಿರುವ ಖಚಿತ ಮಾಹಿತಿ ಲಭಿಸಿತ್ತು. ಅದರಂತೆ ಆರೋಪಿ ಯಿದ್ದ ವಾಹನವನ್ನು ಬೆನ್ನಟ್ಟಿಕೊಂಡು ಬಂದಾಗ ಸಂಜೆ 4 ಗಂಟೆಯ ಸುಮಾರಿಗೆ ಪಂಪ್‌ವೆಲ್ ಬಳಿ ತಪ್ಪಿಸಿಕೊಳ್ಳಲು ಯತ್ನಿಸಿ ಜಪ್ಪು ಕುಡಾ³ಡಿ ಕಡೆಗೆ ವಾಹನ ತಿರುಗಿಸಿದ. ಅದೇ ಮಾರ್ಗದಲ್ಲಿ ಮುಂದೆ ಡೆಡ್ ಎಂಡ್ ಇದ್ದ ಕಾರಣ ವಾಹನವನ್ನು ಯು-ಟರ್ನ್ ಮಾಡಲು ಯತ್ನಿಸಿದ. ಪೊಲೀಸರು ವಾಹನ ಅಡ್ಡವಿಟ್ಟಾಗ ಚೂರಿಯಿಂದ ಹೆಡ್‌ಕಾನ್‌ಸ್ಟೆಬಲ್ ಪ್ರಕಾಶ್ ರ ಮೇಲೆ ಹಲ್ಲೆ ನಡೆಸಿದ. ಆಗ ಇನ್ಸ್‌ಪೆಕ್ಟರ್ ಸುದೀಪ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದರು. ಗಾಯಗೊಂಡ ಪ್ರಕಾಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Related Articles
ಶರಣ್‌ಗೆ ಆಶ್ರಯ ನೀಡಿದ ಮಂಜೇಶ್‌ನನ್ನೂ ಪೊಲೀಸರು ಬಂಧಿಸಿದ್ದಾರೆ. ಇದಕ್ಕೂ ಮೊದಲು ಈತನಿಗೆ ಆಶ್ರಯ ನೀಡಿದ್ದ 7 ಮಂದಿಯ ವಿರುದ್ದ ಕಾವೂರು, ಕಂಕನಾಡಿ ನಗರ, ಬರ್ಕೆ ಠಾಣೆಗಳಲ್ಲಿ 5 ಪ್ರಕರಣ ದಾಖಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ. ಭೂಗತ ಪಾತಕಿ ಸಹಚರ ಮಂಜೇಶ್ ಭೂಗತ ಪಾತಕಿಯೋರ್ವನ ಸಹಚರನಾಗಿದ್ದು ಆತನ ಪರ ಸುಲಿಗೆ ಮಾಡುತ್ತಿ ದ್ದನೆಂಬ ಮಾಹಿತಿ ಇದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
Advertisement
ಪೊಲೀಸ್ ಆಯುಕ್ತರು, ಎಸಿಪಿ ಮಹೇಶ್ ಕುಮಾರ್ ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಒಬ್ಬಂಟಿಯಾಗಿಯೇ ಇರುತ್ತಿದ್ದ ರೌಡಿ ಶರಣ್ ಹೆಚ್ಚಿನ ಸಂದರ್ಭ ಗಳಲ್ಲಿ ಒಬ್ಬಂಟಿ ಯಾಗಿರುತ್ತಿದ್ದ. ಜ. 2ರಂದು ಪೊಲೀಸ್ ವಾಹನಕ್ಕೆ ಕಾರು ಢಿಕ್ಕಿR ಹೊಡೆಸಿ ಪರಾರಿಯಾಗುವಾಗಲೂ ಆತನೇ ಕಾರು ಚಲಾಯಿಸುತ್ತಿದ್ದ. ಮಂಗಳವಾರ ಪೊಲೀಸರು ಬೆನ್ನಟ್ಟಿದಾಗಲೂ ಒಬ್ಬಂಟಿಯಾಗಿ ಕಾರು ಚಲಾಯಿಸುತ್ತಿದ್ದ. ಈತ ಪದೇ ಪದೇ ತನ್ನ ವಾಸ್ತವ್ಯ ಬದಲಿಸಿಕೊಳ್ಳುತ್ತಿದ್ದ. ಪೊಲೀಸರಿಗೆ ಹಲವು ಬಾರಿ ಬೆದರಿಕೆ ಹಾಕಿದ್ದ ಎನ್ನುತ್ತಾರೆ ನಗರದ ಪೊಲೀಸ್ ಅಧಿಕಾರಿಗಳು. ಶರಣ್ 6 ಕೊಲೆ, 2 ಕೊಲೆಯತ್ನ ಪ್ರಕರಣದ ಆರೋಪಿಯಾಗಿದ್ದ
ಶರಣ್ ಮೇಲೆ ಮಂಗಳೂರು ಮತ್ತು ಉಡುಪಿಯಲ್ಲಿ 21 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 6 ಕೊಲೆ, 2 ಅತ್ಯಾಚಾರ, 2 ಕೊಲೆ ಯತ್ನ, 2 ದರೋಡೆಗೆ ಯತ್ನ, 4 ಹಲ್ಲೆ, 2 ಅತ್ಯಾಚಾರ, 1 ದರೋಡೆ ಮತ್ತು ಎನ್‌ಡಿಪಿಎಸ್ ಕಾಯ್ದೆ, ಕಳವು, ಹಫ್ತಾ ವಸೂಲಿ ಪ್ರಕರಣಗಳು. 2017 ಫೆ. 8 ರಂದು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿತ್ತು. 2017 ಡಿ. 26ರಂದು ಬಿಡುಗಡೆಯಾಗಿದ್ದ. 2020ರ ಅ. 20ರಂದು ಸುರೇಂದ್ರ ಬಂಟ್ವಾಳ್‌ನನ್ನು ಜೈಲಿನಲ್ಲಿದ್ದುಕೊಂಡೇ ತನ್ನ ಸಹಚರರಿಂದ ಹತ್ಯೆಗೈದಿದ್ದ. 2022ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. 2023ರ ಜ. 14ರಂದು ಸುರತ್ಕಲ್ ಬಳಿ ಸ್ಕೂಟರ್ ಅಡ್ಡಗಟ್ಟಿ ಸುಲಿಗೆಗೆ ಯತ್ನಿಸಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ. ನಾಲ್ಕು ತಿಂಗಳಲ್ಲಿ ಮತ್ತೆ ಜೈಲಿನಿಂದ ಬಿಡುಗಡೆಯಾಗಿ ತಲೆಮರೆಸಿಕೊಂಡಿದ್ದ. 2015ರಲ್ಲಿ ಮಂಗಳೂರು ಜೈಲಿನಲ್ಲೇ ವಿಚಾರಣಾಧೀನ ಕೈದಿಯ ಕೊಲೆಯತ್ನ ನಡೆಸಿದ್ದ. ಮಣಿಪಾಲದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಬಗ್ಗೆಯೂ ಪ್ರಕರಣ ದಾಖಲಾಗಿತ್ತು. ಶಸ್ತ್ರಾಸ್ತ್ರ ಕಾಯಿದೆಯಡಿಯೂ ಪ್ರಕರಣ ದಾಖಲಾಗಿದೆ. ಮಂಗಳೂರು ನಗರದಲ್ಲೂ 20ಕ್ಕೂ ಅಧಿಕ ಪ್ರಕರಣ
ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 20ಕ್ಕೂ ಅಧಿಕ ಪ್ರಕರಣಗಳಲ್ಲಿ ಶರಣ್ ಆರೋಪಿಯಾಗಿದ್ದ. ಈತನ ಮೇಲೆ ನಿಗಾ ಇಟ್ಟಿದ್ದೆವು. ಮಂಗಳವಾರ ಉಡುಪಿಯಲ್ಲಿದ್ದ ಆರೋಪಿ ಮಂಗಳೂರು ಕಡೆಗೆ ಬರುತ್ತಿದ್ದಾಗ ಪೊಲೀಸರು ಬೆನ್ನಟ್ಟಿಕೊಂಡು ಬಂದರು. ಆಗ ಪೊಲೀಸರ ಮೇಲೆಯೇ ದಾಳಿ ನಡೆಸಿದ್ದ. ಈ ಸಂದರ್ಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗತಿಗೆ ಸೂಚಿಸಿದರೂ ಒಪ್ಪದಿದ್ದಾಗ ಕಾಲಿಗೆ ಗುಂಡು ಹಾರಿಸಿದ್ದೇವೆ. ಹೆಡ್‌ಕಾನ್‌ಸ್ಟೆಬಲ್ ಮೇಲೆ ಆರೋಪಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಹೇಳಿದ್ದಾರೆ.