Advertisement

Mangaluru: 6 ಲಕ್ಷ ರೂ.ಮೌಲ್ಯದ ಡ್ರಗ್ಸ್ ಸಹಿತ ಕುಖ್ಯಾತ ಪೆಡ್ಲರ್ ಬಂಧನ

04:21 PM Dec 11, 2023 | Team Udayavani |

ಮಂಗಳೂರು: ಮಾದಕ ವಸ್ತು ಗಳನ್ನು ಮಾರಾಟ ಮಾಡಿ ತಲೆಮರೆಸಿಕೊಂಡಿದ್ಧ ಕುಖ್ಯಾತ ಹಾಗೂ ಡ್ರಗ್‍ ಪೆಡ್ಲರ್ ನನ್ನು ಕೋಟೆಕಾರು ಗ್ರಾಮದ ಮಾಡೂರು ಸಾಯಿ ಮಂದಿರದ ಸಮೀಪ ಡಿ.11 ರಂದು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

Advertisement

ಬಂಧಿತ ಆರೋಪಿ ಆಶಿತ್‍ ಅಲಿಯಾಸ್ ಅಶ್ವಿತ್‍ (ಆಶು) ಎಂಬಾತನಾಗಿದ್ದು, ಈತನ ಬಳಿಯಿದ್ದ ಸುಮಾರು 100 ಗ್ರಾಂ ತೂಕದ ಎಂಡಿಎಂಎ(6ಲಕ್ಷ ರೂ. ಮೌಲ್ಯ) 600 ಗ್ರಾಂ ತೂಕದ ಗಾಂಜಾ (30,000ರೂ ಮೌಲ್ಯ)1 ಲಕ್ಷ ರೂ. ಮೌಲ್ಯದ ಬೈಕ್ ಸೇರಿ7,77,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಡಿಸೆಂಬರ್ 4 ರಂದು ಉಳ್ಳಾಲ ತಾಲೂಕು ಪೆರ್ಮನ್ನೂರು ಗ್ರಾಮದ ಸಂತೋಷನಗರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಷೇದಿತ ಮಾದಕ ವಸ್ತು ಸುಮಾರು 132 ಗ್ರಾಂ ತೂಕದ ಮೆಥಾಂಫೆಟಮೈನ್ ಮತ್ತು 250 ಎಲ್ ಎಸ್ ಡಿ ಸ್ಟ್ಯಾಂಪ್‍ ಡ್ರಗ್‍ನ್ನು, ಅಕ್ರಮವಾಗಿ ಸಾಗಾಟ ಮಾಡಿ ಮಾರಾಟ ಮಾಡಲು ಬಂದಿದ್ದ ಶಿಶಿರ್ ದೇವಾಡಿಗ ಮತ್ತು ಶುಶಾನ್.ಎಲ್. ರವರನ್ನು ಪತ್ತೆ ಮಾಡಲಾಗಿತ್ತು. ಇಬ್ಬರ ಮಾಹಿತಿ ಆದರಿಸಿ ಆಶಿತ್‍ ನನ್ನ ಬಂಧಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕರಾದ ಬಾಲಕೃಷ್ಣ.ಹೆಚ್.ಎನ್, ಉಳ್ಳಾಲ ಠಾಣಾ ಪಿಎಸ್‍ಐಗಳಾದ ಶೀತಲ್ ಅಲಗೂರ ಮತ್ತು, ಸಂತೋಷಕುಮಾರ್.ಡಿ. ಹಾಗೂ ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ದಕ್ಷಿಣ ಉಪ-ವಿಭಾಗದ Anti-Drug Team ಪಿಎಸ್‍ಐ ಪುನಿತ್‍ ಗಾಂವ್‍ಕರ್, ಹಾಗೂ ಸಿಬಂದಿಗಳಾದ ಹೆಡ್‍ಕಾನ್‍ಸ್ಟೇಬಲ್‍ಗಳಾದ ಸಾಜು ನಾಯರ್, ಮಹೇಶ್‍, ಸಿಬಂದಿಗಳಾದ ಶಿವಕುಮಾರ್, ಅಕ್ಬರ್ ಯಡ್ರಾಮಿರವರು ಭಾಗವಹಿಸಿದ್ದರು.

ನಗರ ಪೊಲೀಸ್ ಆಯುಕ್ತರಾದ ಅನುಪಮ್‍ ಅಗರ್‍ವಾಲ್ ರವರ ನಿರ್ದೇಶನದಲ್ಲಿ ಮಂಗಳೂರು ನಗರದ ಉಪ-ಪೊಲೀಸ್ ಆಯುಕ್ತ ಸಿದ್ಧಾರ್ಥ ಗೋಯಲ್‍, ದಿನೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಧನ್ಯ.ವಿ.ನಾಯಕ್‍ ನೇತೃತ್ವ ವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next