Advertisement
ಈ ಹಿನ್ನೆಲೆಯಲ್ಲಿ ಮರಗಳನ್ನು ಕಡಿಯ ಲೇಬಾರದು ಎಂದು ಛಲ ತೊಟ್ಟಿರುವ ಮಂಗಳೂರು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇದೀಗ ವಿನೂತನ ಹೋರಾಟಕ್ಕೆ ಮುಂದಾಗಿದ್ದಾರೆ. ಇದರಂತೆ ಕಡಿಯಲು ಉದ್ದೇಶಿಸಿರುವ ಮರಗಳ ಮೇಲೆ “ನಮ್ಮನ್ನು ರಕ್ಷಿಸಿ’ ಎಂಬ ಬರಹದ ಭಿತ್ತಿಪತ್ರವನ್ನು ಅಂಟಿಸಲಾಗಿದೆ. ಜತೆಗೆ ಮರಗಳ ಉಳಿವಿನ ಕುರಿತಂತೆ ಸಾರ್ವಜನಿಕರಿಂದ ಅನಿಸಿಕೆಗಳನ್ನು ಪಡೆಯಲು ಉದ್ದೇಶಿಸಲಾಗಿದ್ದು, ಅನಿಸಿಕೆ- ಅಭಿಪ್ರಾಯದ ಬಾಕ್ಸ್ ಇಡಲಾಗಿದೆ. ನಮ್ಮ ಪರಿಸ್ಥಿತಿ ತಿಳಿಯಲು “ಕ್ಯೂ ಆರ್ ಕೋಡ್’ ಸ್ಕ್ಯಾನ್ ಮಾಡುವ ಪರಿಕಲ್ಪನೆಯನ್ನೂ ಭಿತ್ತಿಪತ್ರದಲ್ಲಿ ಮಾಡಲಾಗಿದೆ!
ಸ್ಮಾರ್ಟ್‌ಸಿಟಿ ಯೋಜನೆಯ ನೆಪ ದಲ್ಲಿ ಆವರಣಗೋಡೆ ವಿಸ್ತರಣೆಯ ಸಬೂಬು ಹೇಳಿ ಸ್ವತ್ಛ ಸುಂದರ ಗಾಳಿ ನೀಡುವ ಮರಗಳನ್ನು ಕಡಿಯದಂತೆ ಜನಪ್ರತಿನಿಧಿಗಳಿಗೆ ಮನವಿ ನೀಡಲಾಗಿದೆ. ಆದರೆ ಏನೂ ಆಗಿಲ್ಲ. ನಮಗೆ ನೆರಳಾಗಿದ್ದ ಮರಗಳನ್ನು ಕಡಿಯಲು ವಿದ್ಯಾರ್ಥಿ ಗಳು ಅವಕಾಶ ನೀಡುವುದಿಲ್ಲ. ಹೀಗಾಗಿ ಸಾರ್ವಜನಿಕರಿಂದಲೂ ಸಹಕಾರ ಯಾಚಿಸಲಾಗುತ್ತಿದೆ’ ಎಂದು ಹೋರಾಟ ಗಾರರು ತಿಳಿಸಿದ್ದಾರೆ. ಇದನ್ನೂ ಓದಿ : ಮನೆ-ಮನೆಗೆ ಪೈಪ್ ಮೂಲಕ ಅಡುಗೆ ಅನಿಲ : ತಿಂಗಳೊಳಗೆ ಪ್ರಾಯೋಗಿಕ ಪೂರೈಕೆ
Related Articles
ವಿದ್ಯಾರ್ಥಿ ಸಂತೋಷ್ ಅವರು ಉದಯವಾಣಿ “ಸುದಿನ’ ಜತೆಗೆ ಮಾತನಾಡಿ, “ಇಲ್ಲಿರುವ ಮರಗಳನ್ನು ಕಡಿಯಲು ಮುಂದಾಗಿದ್ದಾರೆ. ದಯವಿಟ್ಟು ಇಲ್ಲಿನ ಮರಗಳನ್ನು ಕಡಿಯದಂತೆ ಸರ್ವರೂ ನಮ್ಮ ಜತೆಗೆ ಕೈಜೋಡಿಸಬೇಕಾಗಿದೆ. ಎಲ್ಲರೂ ಒಂದಾದರೆ ಇಲ್ಲಿನ ಮರಗಳನ್ನು ಉಳಿಸಬಹುದು. ನಮ್ಮ ಕ್ಯಾಂಪಸ್‌ನಲ್ಲಿರುವ ಸುಮಾರು 450ಕ್ಕೂ ಅಧಿಕ ಮಕ್ಕಳಿಗೆ ಈ ಮರಗಳಿಂದಲೇ ಶ್ರೀರಕ್ಷೆಯಿದೆ. ಹೀಗಾಗಿ ಬಿಸಿಲು ಹಾಗೂ ನಮ್ಮ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಇಲ್ಲಿನ ಮರಗಳನ್ನು ಕಡಿಯದಂತೆ ಮನವಿ ಮಾಡುತ್ತಿದ್ದೇವೆ’ ಎನ್ನುತ್ತಾರೆ.
Advertisement
ಶೌಚಗೃಹ ರಕ್ಷಣೆಗೆ ಪ್ರಧಾನಿಗೂ ಪತ್ರ!ಇದೇ ವಿದ್ಯಾಲಯದ ನೂತನ ಶೌಚಗೃಹ ತೆರವುಗೊಳಿಸಲು ಮುಂದಾಗಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇತ್ತೀಚೆಗೆ ಪತ್ರ ಬರೆದಿದ್ದರು. ಅದರ ಬಗ್ಗೆ ಪ್ರತಿಕ್ರಿಯೆ ನಿರೀಕ್ಷಿಸಲಾಗುತ್ತಿದೆ!