ಮಂಗಳೂರು: ಪತಿ ನಿಧನಗೊಂಡ ಐದೇ ದಿನದಲ್ಲಿ ಅದೇ ಬೇಸರದಲ್ಲಿ ಪತ್ನಿಯೂ ಮಾ. 19ರಂದು ನಿಧನ ಹೊಂದಿದ ಘಟನೆ ನಡೆದಿದೆ.
Advertisement
ಡಾ| ಕೆ. ರಮಾನಾಥ ಮಲ್ಲಿ ಕುರಿಯಾಳ ಗುತ್ತು ಅವರ ಪತ್ನಿ, ವೇದಾ ಆರ್. ಮಲ್ಲಿ ಬಾಕ್ರಬೈಲುಗುತ್ತು (89) ನಿಧನ ಹೊಂದಿದವರು. ರಮಾನಾಥ ಮಲ್ಲಿ ಅವರು ಮಾ. 15ರಂದು ನಿಧನರಾಗಿದ್ದರು. ಇಬ್ಬರೂ ಅನ್ಯೋನ್ಯವಾಗಿದ್ದು, ಪತಿಯ ಅಗಲುವಿಕೆಯ ಬೇಸರದಿಂದ ಚೇತರಿಸಿಕೊಳ್ಳದೆ ವೇದಾ ಮಂಗಳೂರಿನ ಪುತ್ರಿಯ ಮನೆಯಲ್ಲಿ ಮೃತಪಟ್ಟರು. ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.