ಮಂಗಳೂರು: ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಸಹಕಾರಿ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ನಿಂದಿಸಿರುವ ಕುರಿತಂತೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ.31ರಂದು ಸಂಜೆ 5 ಗಂಟೆ ವೇಳೆಗೆ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ಲ್ಯಾಂಡ್‌ಲೈನ್‌ಗೆ ಮೇಘರಾಜ್ ಎಂಬ ಅಪರಿಚಿತ ವ್ಯಕ್ತಿ ದೂರವಾಣಿ ಕರೆ ಮಾಡಿದ್ದು, ಕೌಂಟರ್ ನ ಸಿಬಂದಿ ದೂರವಾಣಿ ಕರೆಯನ್ನು ಅವರಿಗೆ ವರ್ಗಾಯಿಸಿದ್ದಾರೆ. ಮಾತನಾಡುವ ವೇಳೆ ಆತ 2 ಕೋಟಿ ರೂ. ಠೇವಣಿ ಇಡುವ ಬಡ್ಡಿ ದರ ವಿಚಾರಿಸಿದ್ದು, ಕೆವೈಸಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದ್ದಾನೆ. ಬಳಿಕ ಅವರ ಮೊಬೈಲ್ ನಂಬರ್ ಕೇಳಿದ್ದು ಅದನ್ನು ನೀಡಿದ್ದಾರೆ.
ಈ ವೇಳೆ ಸಂಸ್ಥೆಗೆ ಸಂಬಂಧಿಸಿದ ಅಕೌಂಟ್ ಬ್ಯಾಲೆನ್ಸ್ ಕೇಳಿದಾಗ ಅದು ವೈಯಕ್ತಿಕ ದಾಖಲೆಯಾಗಿರುವುದರಿಂದ ನೀಡಲು ಬರುವುದಿಲ್ಲವೆಂದು ತಿಳಿಸಿದ್ದಾರೆ.
ಅದಕ್ಕೆ ಆತ ಅವಾಚ್ಯ ಶಬ್ಧಗಳಿಂದ ಬೈದು ಪೋನ್ ಕಟ್ ಮಾಡಿದ್ದಾನೆ. ಬಳಿಕ ಆತ ಅವರ ಮೊಬೈಲ್‌ಗೆ ವ್ಯಾಟ್ಸಾಪ್ ಸಂದೇಶದ ಕಳುಹಿಸಿದ್ದಾನೆ. ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದವರು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೆರೆಗೆ ಬಿದ್ದು ಒಂದೇ ಕುಟುಂಬದ ಇಬ್ಬರು ಬಾಲಕರು ಮೃತ್ಯು… ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ