Advertisement
ತುಳು ರಂಗಭೂಮಿ ನಟ ನವೀನ್ ಡಿ. ಪಡೀಲ್ ಬಿಡುಗಡೆ ನೆರವೇರಿಸಿ ಮಾತನಾಡಿ, ನಾನು ಸ್ವತ್ಛ ಮಂಗಳೂರು ರಾಯಭಾರಿ ಯಾಗಿದ್ದವನು, ಸ್ವತ್ಛ ಹಾಗೂ ಮಾಲಿನ್ಯ ಪರಿಸರ ನಮ್ಮೆಲ್ಲರಿಗೂ ಅಗತ್ಯ, ಇಂತಹ ದ್ವಿಚಕ್ರ ವಾಹನದಿಂದ ಮಂಗಳೂರು ಮಾಲಿನ್ಯಮುಕ್ತವಾಗಲಿ ಎಂದು ಹಾರೈಸಿದರು.
Related Articles
ಭಾರತದ ಗ್ರೀನ್ ಟು-ವೀಲರ್ ಆಫ್ ದಿ ಯಿಯರ್ ಪ್ರಶಸ್ತಿಗೆ ಪಾತ್ರವಾಗಿರುವ ಐಕ್ಯೂಬ್ 4.2 ಸೆಕೆಂಡ್‌ಗಳಲ್ಲಿ 40 ಕಿ.ಮೀ/ಪ್ರತೀ ಗಂಟೆ ವೇಗ ಪಡೆಯಬಲ್ಲದು. ಕ್ಯೂ ಪಾರ್ಕ್ ಅಸಿಸ್ಟೆಂಟ್ ಮೂಲಕ ರಿವರ್ಸ್ ಚಲಾಯಿಸಲು ನೆರವಾಗುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ 145 ಕಿ.ಮೀ ಚಲಾಯಿಸ ಬಹು ದಾಗಿದೆ. ಪ್ಲಗ್ ಆ್ಯಂಡ್ ಪ್ಲೇ ಕ್ಯಾರಿ ಅಲಾಂಗ್ ಚಾರ್ಜರ್ ಹೊಂದಿದ್ದು ಎಲ್ಲೇ ಆದರೂ ನಿಲ್ಲಿಸಿ ಚಾರ್ಜ್ ಮಾಡಬಹುದು.
Advertisement
ಸ್ಮಾರ್ಟ್ ಎಲ್‌ಇಡಿ ಹೆಡ್‌ಲೈಟ್ ವಿತ್ ಡಿಆರ್‌ಎಲ್, 32 ಲೀಟರ್ ಸ್ಟೋರೇಜ್, 7 ಇಂಚಿನ ಮಲ್ಟಿಫಂಕ್ಷನಲ್ ಟಚ್ ಸ್ಕ್ರೀನ್ ಡ್ಯಾಶ್‌ಬೋರ್ಡ್, ಫಾಸ್ಟ್ ಚಾರ್ಜಿಂಗ್, ಅಲೆಕ್ಸಾ ಇಂಟಿಗ್ರೇಶನ್, ರಿಮೋಟ್ ವೆಹಿಕಲ್ ಇಮ್ಮೊಬಿಲೈಸರ್, ಕೀಲೆಸ್ ಅನ್‌ಲಾಕಿಂಗ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.