Advertisement
ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, ಆರೋಪಿಯನ್ನು ಮುಂಬೈನಿಂದ ಬಂಧಿಸಲಾಗಿದೆ. ಈತನ ವಿರುದ್ಧ ಈ ಹಿಂದೆಯೇ ಮುಂಬೈನಲ್ಲಿ ಕಳವು ಸೇರಿದಂತೆ 9ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.
Related Articles
ಕಳ್ಳರು ಕಳ್ಳತನ ಮಾಡುವ ಸುಮಾರು 3 ದಿನಗಳ ಮೊದಲು ಮುಂಬೈನಿಂದ ನಗರಕ್ಕೆ ಆಗಮಿಸಿ 5-6 ಮೊಬೈಲ್ ಅಂಗಡಿಗಳನ್ನು ಸರ್ವೆ ಮಾಡಿದ್ದರು. ಎಲ್ಲಿ ಭದ್ರತೆ ಸರಿಯಾಗಿಲ್ಲ, ಎಲ್ಲಿ ಸುಲಭವಾಗಿ ಕಳ್ಳತನ ಮಾಡಬಹುದು ಎಂದು ಖಚಿತ ಪಡಿಸಿಕೊಂಡಿದ್ದರು. ಗ್ರಾಹಕರ ಸೋಗಿನಲ್ಲಿ ಮೊಬೈಲ್ ಶೋರೂಂಗಳಿಗೆ ಹೋಗಿ ವಾಶ್‌ರೂಂ ಉಪಯೋಗಿಸುವ ನೆಪದಲ್ಲಿ ಒಳಗೆ ತಿರುಗಾಡಿ ಕಳ್ಳತನ ಮಾಡಲು ಸುಲಭ ದಾರಿ ಎಲ್ಲಿದೆ ಎಂಬುದನ್ನು ತಿಳಿದುಕೊಂಡು ಹೋಗಿದ್ದರು. ಅದರಂತೆ ಒಂದು ದಿನ ಬಲ್ಮಠದ ಈ ಮೊಬೈಲ್ ಶೋರೂಂಗೆ ಬಂದು ನಿರ್ದಿಷ್ಟ ಸ್ಥಳವೊಂದರಲ್ಲಿ 2-3 ಸರಳುಗಳನ್ನು ಮಾತ್ರ ತುಂಡರಿಸುವ ಮೂಲಕ ಸುಲಭವಾಗಿ ಒಳಗೆ ಹೊಕ್ಕಿದ್ದಾರೆ. ಇಷ್ಟು ದೊಡ್ಡ ಮೊಬೈಲ್ ಶೋರೂಂನಲ್ಲಿ ಸೈರನ್ ಸೇರಿದಂತೆ ಸೂಕ್ತ ಭದ್ರತಾ ವ್ಯವಸ್ಥೆಗಳು ಇರಲಿಲ್ಲ. 2-3 ವರ್ಷಗಳ ಹಿಂದೆ ಕೂಡ ಇದೇ ಶೋರೂಂನಲ್ಲಿ ಕಳ್ಳತನ ನಡೆದಿದ್ದರೂ ಮಾಲಕರು ನಿರ್ಲಕ್ಷ್ಯ ತೋರಿರುವುದು ಕಂಡುಬಂದಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಡಿಸಿಪಿಗಳಾದ ಹರಿರಾಂ ಶಂಕರ್ ಮತ್ತು ದಿನೇಶ್ ಕುಮಾರ್ ಉಪಸ್ಥಿತರಿದ್ದರು.
Advertisement