Advertisement

Mangaluru ಎಂಡಿಎಂಎ ಮಾರಾಟ: ಇಬ್ಬರ ಬಂಧನ

12:49 AM Jan 03, 2024 | Team Udayavani |

ಮಂಗಳೂರು: ಪಡೀಲ್‌ ರೈಲ್ವೇ ಬ್ರಿಜ್‌ನಿಂದ ಸರಿಪಳ್ಳಕ್ಕೆ ಹೋಗುವ ಕಚ್ಚಾ ರಸ್ತೆಯಲ್ಲಿ ಕಪ್ಪು ಬಣ್ಣದ ಹೋಂಡ ಆಕ್ಟಿವಾ ಸ್ಕೂಟರ್‌ನಲ್ಲಿ ಮಾದಕ ವಸ್ತುವಾದ ಎಂಡಿಎಂಎ ಅನ್ನು ಮಾರಾಟ ಮಾಡುತ್ತಿದ್ದ ಅಶ್ಪಾಕ್‌ ಯಾನೆ ಜುಟ್ಟು ಅಶ್ಪಾಕ್‌ (27) ಮತ್ತು ಉಮರ್‌ ಫಾರೂಕ್‌ ಇರ್ಫಾನ್‌ (26) ನನ್ನು ಸೋಮವಾರದಂದು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

Advertisement

ಜುಟ್ಟು ಅಶ³ಕ್‌ ಮೇಲೆ ಈ ಹಿಂದೆ ಮಂಗಳೂರು ಗ್ರಾಮಾಂತರ, ಕಂಕನಾಡಿ ನಗರ, ಉಳ್ಳಾಲ, ಸುರತ್ಕಲ್‌, ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಗಳಲ್ಲಿ ಕೊಲೆ ಯತ್ನ, ದರೋಡೆ, ಸುಲಿಗೆ ದೊಂಬಿಯಂತಹ ಒಟ್ಟು 12 ಪ್ರಕರಣಗಳು ದಾಖಲಾಗಿವೆ.

ಉಮ್ಮರ್‌ ಫಾರೂಕ್‌ ಇರ್ಫಾನ್‌ನ ಮೇಲೆ ಈ ಹಿಂದೆ ಮಂಗಳೂರು ದಕ್ಷಿಣ, ಮಂಗಳೂರು ಗ್ರಾಮಾಂತರ, ಉಳ್ಳಾಲ, ಮೂಡುಬಿದಿರೆ, ಬರ್ಕೆ, ಕೊಣಾಜೆ, ಸುರತ್ಕಲ್‌, ಕಾರ್ಕಳ ನಗರ, ಶಿರ್ವ, ಕಾರ್ಕಳ ಗ್ರಾಮಾಂತರ, ಮಂಗಳೂರು ಉತ್ತರ, ಮಂಗಳೂರು ಪೂರ್ವ ಪೊಲೀಸ್‌ ಠಾಣೆಗಳಲ್ಲಿ ಕೊಲೆಯತ್ನ, ದರೋಡೆ, ಸುಲಿಗೆ, ಸರಗಳ್ಳತನ, ದೊಂಬಿ, ವಾಹನ ಕಳ್ಳತನದಂತಹ ಒಟ್ಟು 25 ಪ್ರಕರಣಗಳು ದಾಖಲಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next