Advertisement

Mangaluru ಮಂಗಳಮುಖಿ ನಾಪತ್ತೆ

12:30 AM Jan 14, 2024 | Team Udayavani |

ಮಂಗಳೂರು: ಉಳ್ಳಾಲಬೈಲ್‌ ಬಾಡಿಗೆ ಮನೆಯಲ್ಲಿ ವಾಸವಿದ್ದ ದಾವಣಗೆರೆ ಹರಿಹರ ಮೂಲದ ಮಂಗಳಮುಖಿ ತಲಾಶ್‌ ಆಲಿಯಾಸ್‌ ರೋಶಿನಿ (35) ನಾಪತ್ತೆಯಾಗಿದ್ದಾರೆ.

Advertisement

ಜ. 8ರಂದು ರಾತ್ರಿ ಮಂಗಳೂರಿಗೆ ಹೋಗಿ ವಾಪಸ್‌ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ ಎಂದು ಅವರೊಂದಿಗೆ ರೂಮಿನಲ್ಲಿ ವಾಸವಿದ್ದ ಮಂಗಳಮುಖಿಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

ಗೋಧಿ ಮೈಬಣ್ಣ, 5.6 ಅಡಿ ಎತ್ತರ ಹೊಂದಿದ್ದು ಕೆಂಪು ಸೀರೆ, ಕಪ್ಪು ಮತ್ತು ಗೋಲ್ಡ್‌ ಬಣ್ಣದ ಬ್ಲೌಸ್‌ ಧರಿಸಿದ್ದರು. ಕನ್ನಡ, ಹಿಂದಿ, ಉರ್ದು ಭಾಷೆ ಮಾತನಾಡುತ್ತಾರೆ. ಮಾಹಿತಿ ದೊರೆತವರು ಕಂಕನಾಡಿ ನಗರ ಪೊಲೀಸ್‌ ಠಾಣೆ (0824-2220529) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next