Advertisement

Mangaluru ಮಂಗಳಾದೇವಿ ದೇವಸ್ಥಾನ: 11 ಸ್ಟಾಲ್‌ಗ‌ಳ ಹರಾಜು

11:17 PM Oct 14, 2023 | Team Udayavani |

ಮಂಗಳೂರು: ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಸಂತೆ ವ್ಯಾಪಾರಕ್ಕೆ ಸಂಬಂಧಿಸಿದ 11 ಸ್ಟಾಲ್‌ಗ‌ಳ ಹರಾಜು ಪ್ರಕ್ರಿಯೆ ಶನಿವಾರ ನಡೆಯಿತು. ಈ ವೇಳೆ ಆರು ಸ್ಟಾಲ್‌ಗ‌ಳನ್ನು ಅನ್ಯ ಸಮುದಾಯಕ್ಕೆ ಸೇರಿದವರು ಪಡೆದುಕೊಂಡಿದ್ದು, ಉಳಿದ ಐದು ಸ್ಟಾಲ್‌ಗ‌ಳು ಹಿಂದೂ ಜಾತ್ರಾ ವ್ಯಾಪಾರಸ್ಥರ ಪಾಲಾಯಿತು.

Advertisement

ಮೂರು ದಿನಗಳ ಹಿಂದೆ ದೇವಸ್ಥಾನದ ಆಡಳಿತ ಸಮಿತಿ ಟೆಂಡರ್‌ ಕರೆದು ಅಂತಿಮಗೊಳಿಸಿದಾಗ 125 ಸ್ಟಾಲ್‌ಗ‌ಳ ಪೈಕಿ 71 ಮಂದಿ ಮಾತ್ರ ಬಿಡ್‌ ಮೊತ್ತ ಪಾವತಿಸಿ ಸ್ಟಾಲ್‌ಗ‌ಳನ್ನು ಪಡೆದುಕೊಂಡಿದ್ದರು. ಪ್ರಸ್ತುತ 11 ಸ್ಟಾಲ್‌ ಸೇರಿ 82 ಸ್ಟಾಲ್‌ಗ‌ಳು ಹಂಚಿಕೆಯಾಗಿವೆ. ಇಲ್ಲಿಗೆ ಟೆಂಡರ್‌ ಮುಕ್ತಾಯವಾಗಿದ್ದು, ಬಾಕಿ ಉಳಿದಿರುವ ಸ್ಟಾಲ್‌ಗ‌ಳಿಗೆ ಟೆಂಡರ್‌ ಕರೆಯುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next