ಮಂಗಳೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹತ್ತು ತಿಂಗಳ ಅವಧಿಯಲ್ಲಿ 19,348 ಮಹಿಳೆಯರು ಖಾತೆ ತೆರೆದು ನಗದು ಠೇವಣಿ ಇರಿಸಿದ್ದಾರೆ.
ಎಪ್ರಿಲ್‌ನಿಂದ ಜಾರಿಗೆ ಬಂದಿರುವ ಈ ಯೋಜನೆಗೆ ಪ್ರತೀ ತಾಲೂಕಿನಲ್ಲಿ ಒಂದು ಹಳ್ಳಿಯನ್ನು ಈ ಯೋಜನೆಗಾಗಿ ಆಯ್ಕೆ ಮಾಡಿಕೊಂಡು ಆ ಹಳ್ಳಿಯಲ್ಲಿ ಕನಿಷ್ಠ 100 ಖಾತೆಯನ್ನು ತೆರೆಯಲು ಮೇಳ ನಡೆಸಲು ಅಂಚೆ ಇಲಾಖೆ ತೀರ್ಮಾನಿಸಿದೆ. 2 ವರ್ಷದವರೆಗೆ ಮಹಿಳೆಯರು ಈ ಯೋಜನೆಯಡಿ ಠೇವಣಿ ಇಡುವುದಕ್ಕೆ ಅವಕಾಶವಿದ್ದು, ಕನಿಷ್ಠ 1 ಸಾವಿರ ರೂ.ಗಳಿಂದ 2 ಲಕ್ಷ ರೂ. ವರೆಗೆ ಠೇವಣಿ ಇಟ್ಟರೆ ಶೇ. 7.5ರ ಬಡ್ಡಿಯೊಂದಿಗೆ 2 ವರ್ಷದ ಅನಂತರ ಹಣವನ್ನು ಬಡ್ಡಿಯೊಂದಿಗೆ ಹಿಂದಿರುಗಿಸುವ ಯೋಜನೆ ಇದಾಗಿದೆ. ಮಹಿಳಾ ಸಶಕ್ತೀಕರಣವನ್ನು ದೃಷ್ಟಿಯಲ್ಲಿರಿಸಿಕೊಂಡು ಸರಕಾರ ಈ ನಡೆಗೆ ಮುಂದಾಗಿದೆ.
2 ಲಕ್ಷ ರೂ. ಠೇವಣಿ ಇರಿಸಿ ದರೆ ಖಾತೆದಾರರಿಗೆ ಬಡ್ಡಿ ಸಹಿತ ರೂ. 2,32,044 ರೂ. ಹಣ ಹಿಂದಿರುಗಿಸಲಾಗುತ್ತದೆ. ಚಿಕ್ಕಮಕ್ಕ ಳಿಂದ ಎಲ್ಲ ವಯೋಮಾನದ ಮಹಿಳೆ ಯರಿಗಾಗಿ ಈ ಯೋಜನೆಯನ್ನು ರೂಪಿಸಲಾಗಿದ್ದು, 2025 ಮಾ. 31ರಂದು ಯೋಜನೆ ಮುಕ್ತಾಯ ಗೊಳ್ಳಲಿದೆ.
ಒಬ್ಬ ಮಹಿಳೆ ಹೆಸರಿನಲ್ಲಿ ಒಂದು ಠೇವಣಿ ಇಡಲು ಅವಕಾಶವಿದ್ದು, ಮತ್ತೂಮ್ಮೆ ಠೇವಣಿ ಇಡಬೇಕಾದರೆ ಮೂರು ತಿಂಗಳ ನಂತರ ಇಡಬಹುದು. ವಿವಿಧ ಹಂತಗಳ ಅಭಿಯಾನ ನಡೆಸಿ ಜನರಿಗೆ ಯೋಜನೆಯನ್ನು ತಲುಪಿ ಸಲಾಗುತ್ತಿದೆ ಎಂದು ಅಂಚೆ ಅಧಿಧೀ ಕ್ಷಕರು ತಿಳಿಸಿದ್ದಾರೆ.