Advertisement

ನ್ಯಾಯಾಂಗದ ತೀರ್ಪಿಗೆ ಎಲ್ಲರೂ ಗೌರವ ಕೊಡಬೇಕು: ಜನಾರ್ದನ ಪೂಜಾರಿ

02:48 PM Nov 08, 2019 | Team Udayavani |

ಮಂಗಳೂರು: ಅಯೋಧ್ಯೆ ತೀರ್ಪು  ಹೊರಬೀಳುವಾಗ ಪ್ರತಿಯೊಬ್ಬರು ಶಾಂತಿ ಸಾಮರಸ್ಯ ಕಾಪಾಡಬೇಕು. ನ್ಯಾಯಾಂಗದ ತೀರ್ಪುಗೆ ಎಲ್ಲರೂ ಗೌರವ ಕೊಡಬೇಕು. ಈ ವಿಚಾರವಾಗಿ ಎಲ್ಲರೂ ಸಹಕರಿಸಬೇಕು ಎಂದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಹೇಳಿದರು.

Advertisement

ಅವರು ಮಂಗಳೂರಿನಲ್ಲಿ ಶುಕ್ರವಾರದಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಸಿಎಂ ಯಡಿಯೂರಪ್ಪ ಆಡಿಯೋ ಕುರಿತಂತೆ ಪ್ರತಿಕ್ರಿಯಿಸಿದ ಅವರು ನ್ಯಾಯಾಲಯ ಆಡಿಯೋವನ್ನು ಪರಿಗಣಿಸುವುದಾಗಿ  ಹೇಳಿರುವುದು ಸ್ವಾಗತಾರ್ಹ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಇಂತಹ ಕುಟಿಲ ತಂತ್ರ ಪುನರ್ ವರ್ತನೆಯಾಗದಂತೆ ನೋಡಿಕೊಳ್ಳಬೇಕು.

ಚುನಾವಣೆಯಲ್ಲಿ ಜನಾಭಿಪ್ರಾಯ ಮೂಲಕ ಅಧಿಕಾರ ನಡೆಸಿದ ಸರಕಾರವನ್ನು ಬೀಳಿಸಿದ ಯಡಿಯೂರಪ್ಪ, ಅಮೀತ್ ಶಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಮಹಾರಾಷ್ಟ್ರದಲ್ಲೂ ರೆಸಾರ್ಟ್ ರಾಜಕೀಯಕ್ಕೆ ಹೊರಟಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಹೇಳಿದರು.

ಮಂಗಳೂರು ಮಹಾ ನಗರ ಪಾಲಿಕೆ ಚುನಾವಣೆ ಸಂಬಂಧ ಕಾಂಗ್ರೆಸ್ ಟಿಕೇಟ್ ಹಂಚಿಕೆಯಲ್ಲೂ ಗೊಂದಲ ಹಾಗೂ ಕೆಲವರಿಗೆ ಟಿಕೇಟ್ ಸಿಗದಿರುವ ಕಾರಣದಿಂದ ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಸುಲಭವಾಗಲಿದ್ದು, ನ 14 ರಂದು ಬರುವ ಫಲಿತಾಂಶದಲ್ಲಿ ಕಾಂಗ್ರೆಸ್ ಕಣ್ಣೇರು ಹಾಕುವ ಪರಿಸ್ಥಿತಿ ಎದುರಾಗಲಿದೆ ಎಂದು ಹೇಳಿದರು. ಸಿದ್ಧರಾಮಯ್ಯ ಆಡಳಿತ ಕಾಲದಲ್ಲಿ ಮಂಗಳೂರಿಗೆ ಐದುವರೆ ಸಾವಿರ ಕೋಟಿ ರೂ. ಬಂದಿದೆ ಎಂಬುವುದು ಸುಳ್ಳು ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next