ಮಂಗಳೂರು: ಸಹ್ಯಾದ್ರಿ ಕಾಲೇಜಿನಲ್ಲಿ ಟೀಂ ಚಾಲೆಂಜರ್ಸ್ ವತಿಯಿಂದ ಎರಡು ದಿನಗಳ 4 ನೇ ಆವೃತ್ತಿಯ ಇಸ್ರೋ ಹ್ಯಾಕಥಾನ್ ಮತ್ತು ಏರೋಫಿಲಿಯಾ ಕಾರ್ಯಕ್ರಮಕ್ಕೆ ಶುಕ್ರವಾರ ಕಾಲೇಜಿನ ಮೈದಾನದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ `ಭಾರತೀಯ ನೌಕಾದಳದ ಮಾಜಿ ಕಮಾಂಡರ್ ಟಿ.ಆರ್.ಎ. ನಾರಾಯಣನ್, ಇಸ್ರೋದ ಮನೀಶ್ ಸಕ್ನೇನಾ, ಅಖಿಲೇಶ್ವರ್ ರೆಡ್ಡಿ ಪಿ., ಎಸ್ ಎನ್‌ಆರ್ ರೂರಲ್ ಎಜ್ಯುಕೇಶನ್ ಟ್ರಸ್ಟ್ ನ ಅಶ್ವಿನ್ ಎಲ್. ಶೆಟ್ಟಿ, ಸಹ್ಯಾದ್ರಿ ಸಮೂಹ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಭಂಡಾರಿ, ಇಕ್ವೀರಿಯನ್ಸ್ ಡಿಸೈನ್ ಇನ್ಫೋಸೀಸ್‌ನ ಮಾಜಿ ಮುಖ್ಯಸ್ಥರಾದ ಅಭಯ್ ಪವಾರ್, ಮಾಡೆಲ್ ಏರೋಸ್ಪೋರ್ಟ್ಸ್ನ ನಿರ್ದೇಶಕ ರಾಘವೇಂದ್ರ ಬಿ.ಎಸ್., ವಿಶಾಲ್ ರಾವ್, ಡಾ| ಆನಂದ್ ವೇಣುಗೋಪಾಲ್, ಪಂಕಜ್ ರಾಯ್, ಡಾ| ಹಂಸರಾಜ್ ಆಳ್ವ ಸೇರಿದಂತೆ ಮತ್ತಿತರರು ಇದ್ದರು.
ಏರ್ ಶೋನಲ್ಲಿ ಕರ್ನಾಟಕ, ಗುಜರಾತ್, ಕೇರಳ, ಆಂಧ್ರ ಪ್ರದೇಶ, ಹರಿಯಾಣ ಸೇರಿದಂತೆ ಸುಮಾರು 31 ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಒಟ್ಟಾರೆ 35 ತಂಡಗಳು ಸೇರಿ 500 ಕ್ಕೂ ಮಿಕ್ಕಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ವಿದ್ಯಾರ್ಥಿಗಳು ತಯಾರಿಸಿದ ಸುಮಾರು 10 ಕ್ಕೂ ಹೆಚ್ಚಿನ ಮಾದರಿಯ ಏರ್ ಕ್ರಾಫ್ಟ್ ನ ಮಾದರಿಗಳನ್ನು ವಿದ್ಯುತ್ ಚಾಲಿತ ವ್ಯವಸ್ಥೆಯಲ್ಲಿ ರಿಮೋಟ್ ಕಂಟ್ರೋಲ್ ಮೂಲಕ ಪ್ರದರ್ಶಿಸಿದರು.