Advertisement

Mangaluru Airport : ಅ. 31ರಿಂದ ಅದಾನಿ ಸುಪರ್ದಿಗೆ

12:19 AM Oct 07, 2023 | Team Udayavani |

ಮಂಗಳೂರು: ಮಂಗಳೂರಿನ ವಿಮಾನ ನಿಲ್ದಾಣದ ಪೂರ್ಣ ಆಡಳಿತವು ಅ. 31ರ ಅನಂತರ ಅದಾನಿ ಸಮೂಹದ ಪಾಲಾಗಲಿದೆ.

Advertisement

2020ರ ಅ. 31ರಂದು ಮಂಗಳೂರು ಸೇರಿದಂತೆ ದೇಶದ 6 ವಿಮಾನ ನಿಲ್ದಾಣಗಳ ಆಡಳಿತವನ್ನು ಅದಾನಿ ಸಂಸ್ಥೆ ತನ್ನ ವಶಕ್ಕೆ ಪಡೆದುಕೊಂಡಿತ್ತು. ಆಗಿನ ಒಪ್ಪಂದ ಪ್ರಕಾರ ಮೂರು ವರ್ಷಗಳವರೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಅರ್ಧದಷ್ಟು ಸಿಬಂದಿ ಹಾಗೂ ಅದಾನಿ ಸಿಬಂದಿ ಜತೆಯಾಗಿಯೇ ಕೆಲಸ ಮಾಡಬೇಕಿತ್ತು.

ಈ ಒಪ್ಪಂದದ ಅವಧಿ ಅ.30ಕ್ಕೆ ಮುಕ್ತಾಯಗೊಳ್ಳುತ್ತಿದೆ. ಆ ವಿಮಾನ ನಿಲ್ದಾಣದ ಪೂರ್ಣ ಆಡಳಿತ ಅದಾನಿ ಪಾಲಾಗಲಿದೆ.

ಈ ಕಾರಣದಿಂದ ವಿಮಾನ ನಿಲ್ದಾಣದ ಹಣಕಾಸು, ಎಚ್‌ಆರ್‌, ಆಡಳಿತ, ವಾಣಿಜ್ಯ, ಅಗ್ನಿಶಾಮಕ, ಟರ್ಮಿನಲ್‌ ವಿಭಾಗ ಅ. 31ರ ಬಳಿಕ ಅದಾನಿ ಆಡಳಿತಕ್ಕೆ ಒಳಪಡಲಿದೆ. ಮುಂದೆ, ಏರ್‌ಟ್ರಾಫಿಕ್‌ ಕಂಟ್ರೋಲ್‌ (ಎಟಿಸಿ), ಕಾರ್ಗೊ ಹಾಗೂ ಸಿಎನ್‌ಎಸ್‌(ಕಮ್ಯುನಿಕೇಶನ್‌ ನೇವಿಗೇಶನ್‌ ಆ್ಯಂಡ್‌ ಸರ್ವೆಲೆನ್ಸ್‌) ಮಾತ್ರ ಎಎಐ ನಿರ್ವಹಿಸಲಿದೆ.

ಕಳೆದ ಮೂರು ವರ್ಷಗಳ ಅಂತರದಲ್ಲಿ ಏರ್‌ಪೋರ್ಟ್‌ನಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಆಗಮನ ಹಾಲ್‌ ರಚಿಸಲಾಗಿದೆ. ಹಿಂದಿನ ಹಾಲ್‌ ಅನ್ನು ವಿಶಾಲವಾಗಿ ದೇಶೀಯ ಯಾನಿಗಳಿಗೆ ಮೀಸ ಲಿರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next