Advertisement
ಕೆಲವು ಸಮಯಗಳ ಹಿಂದೆ ನಗರದ ಕೆಲವು ಕಡೆಗಳಲ್ಲಿ ಅವೈಜ್ಞಾನಿಕ ಹಂಪ್ಸ್ ನಿರ್ಮಿಸಲಾಗಿತ್ತು. ಇದು ಅಪಘಾತಕ್ಕೆ ಕಾರಣವಾಗುತ್ತಿತ್ತು. ಸಾರ್ವಜನಿಕರಿಂದ ವಿರೋಧ ಬಂದ ಕಾರಣ ಇದೀಗ ಬಹುತೇಕ ಕಡೆಗಳಲ್ಲಿ ವೈಜ್ಞಾನಿಕ ರೀತಿಯ ಐಆರ್‌ಸಿ ಮಾದರಿಯ ಹಂಪ್‌ಗ್ಳನ್ನು ಅಳವಡಿಸಲಾಗಿದೆ. ಇನ್ನು, ರಬ್ಬರ್ ಹಂಪ್‌ಗ್ಳನ್ನು ತೆರವು ಮಾಡಲಾಗಿದ್ದು, ಕೆಲವೆಡೆ ಹೊಸ ಹಂಪ್ಸ್ ನಿರ್ಮಾಣವಾದರೆ ಇನ್ನೂ ಕೆಲವೆಡೆ ಹಂಪ್ಸ್ ನಿರ್ಮಿಸಬೇಕಷ್ಟೆ. ಆದರೆ ಈಗಾಗಲೇ ನಿರ್ಮಿಸಿದ ಹಂಪ್‌ಗ್ಳಲ್ಲಿ ಬಣ್ಣ ಮಾಸಿದ್ದು, ಮತ್ತೆ ಬಳಿಯಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.
Related Articles
ಸಾಮಾನ್ಯವಾಗಿ ರಸ್ತೆಗಳು ಗುಂಡಿ ಬೀಳುತ್ತದೆ. ಆದರೆ ನಗರದ ಕೆಲವು ಕಡೆ ಹಂಪ್‌ಗ್ಳಲ್ಲಿಯೂ ಗುಂಡಿಯಾಗಿದ್ದು, ಸಮಸ್ಯೆಗೆ ಕಾರಣವಾಗಿದೆ. ಮುಖ್ಯವಾಗಿ ನಗರದ ಎಂಪೈರ್ ಮಾಲ್ ಬಳಿಯ ಹಂಪ್ಸ್ ಅಂಚಿನಲ್ಲಿ ಡಾಮರು ಕಿತ್ತು ಹೋಗಿದ್ದು, ವಾಹನ ಸವಾರರು ಗುಂಡಿ ತಪ್ಪಿಸಲು ಹೋಗಿ ಅಪಘಾತಕ್ಕೆ ಒಳಗಾಗುವ ಸಂದರ್ಭ ಎದುರಾಗಿದೆ.
Advertisement
ರಸ್ತೆ ದಾಟಲು ಸಂಕಷ್ಟಪಾದಚಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ, ಅತೀ ಹೆಚ್ಚು ಜನ ಸೇರುವ ಕಡೆಗಳಲ್ಲಿ ಝೀಬ್ರಾ ಕ್ರಾಸ್ ಅನ್ನು ಅಳವಡಿಸಲಾಗಿದ್ದು, ಬಹುತೇಕ ಕಡೆ ಝೀಬ್ರಾ ಕ್ರಾಸ್‌ಗಳ ಬಣ್ಣ ಮಾಸಿದೆ. ಇದರಿಂದ ಸಿಗ್ನಲ್‌ಗಳಲ್ಲಿ ವಾಹನಗಳು ನಿಲ್ಲಿಸಲು ಸೂಚನೆ ಸಿಗದಂತಾಗಿದೆ. ಇನ್ನು, ಸಾರ್ವಜನಿಕರು ಕೂಡ ರಸ್ತೆ ದಾಟಲು ಕಷ್ಟಪಡುವಂತಾಗಿದೆ.