Advertisement

Mangaluru: ಹೆಲಿಕಾಪ್ಟರ್ ಸಂಚಾರ: ಸ್ಥಳ ಬದಲಾವಣೆ

03:45 PM Dec 24, 2024 | Team Udayavani |

ಮಂಗಳೂರು: ಕರಾವಳಿ ಉತ್ಸವ ಅಂಗವಾಗಿ ಸಾರ್ವಜನಿಕರ ಆಕಷ೯ಣೆಗೆ ನಡೆಯುತ್ತಿರುವ ಹೆಲೆಕಾಪ್ಟರ್ ಸಂಚಾರದ ನಿಲ್ದಾಣವನ್ನು ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.

Advertisement

ಇದುವರೆಗೆ ಮೇರಿಹಿಲ್ ಹೆಲಿಪ್ಯಾಡ್ ನಿಂದ ಹೆಲಿಕಾಪ್ಟರ್ ಸಂಚಾರ ಕಾರ್ಯಚರಣೆ ನಡೆಸುತ್ತಿತ್ತು. ತಾಂತ್ರಿಕ ಕಾರಣಗಳಿಂದ ಇದನ್ನು ಅಡ್ಯಾರಿಗೆ ಸ್ಥಳಾಂತರಿಸಲಾಗಿದೆ.

ಸಾರ್ವಜನಿಕರು ಹೆಲಿಕಾಪ್ಟರ್ ನಲ್ಲಿ ನಗರ ದರ್ಶನ ಮತ್ತು ಕಡಲ ಕಿನಾರೆಯ ಸೌಂದರ್ಯವನ್ನು ಆಕರ್ಷಕವಾಗಿ ವೀಕ್ಷಿಸಬಹುದಾಗಿದೆ.

ಹೆಲಿಕಾಪ್ಟರ್ ಪ್ರಯಾಣದ ಪ್ರತಿ ಟ್ರಿಪ್‍ನಲ್ಲಿ 6 ಜನರಿಗೆ ಸಂಚರಿಸಲು ಅವಕಾಶವಿದ್ದು, ಹೆಲಿಕಾಫ್ಟರ್‍ ನಲ್ಲಿ ಸಂಚರಿಸಲು ಆಸಕ್ತರು ಬುಕ್ಕಿಂಗ್‍ಗಾಗಿ ವೆಬ್‍ಸೈಟ್ www.helitaxii.com ಸಂಪರ್ಕಿಸಬಹುದಾಗಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next