Advertisement

MIA: ವಿಮಾನ ನಿಲ್ದಾಣದಲ್ಲಿ 6.47 ಲಕ್ಷ ರೂ.ಮೌಲ್ಯದ ಚಿನ್ನ ವಶ

09:16 PM Oct 22, 2023 | Team Udayavani |

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅಕ್ಟೋಬರ್ 21 ರಂದು ಚಿನ್ನ ಕಳ್ಳಸಾಗಣೆ ಯತ್ನವನ್ನು ವಿಫಲಗೊಳಿಸಿದ್ದು, ದುಬೈನಿಂದ ಬಂದ ಇಂಡಿಗೋ ವಿಮಾನ ಪ್ರಯಾಣಿಕರನ್ನು ಪ್ರೊಫೈಲ್ ಆಧರಿಸಿ ತಡೆಹಿಡಿದು 6.47 ಲಕ್ಷ ರೂಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದೆ.

Advertisement

ತಪಾಸಣೆ ವೇಳೆ ಎರಡು ಪದರದ ಬಿಸ್ಕೆಟ್ ಗಳು ಮತ್ತು ಚಾಕೊಲೇಟ್‌ಗಳಿರುವ ಎರಡು ರಟ್ಟಿನ ಬಾಕ್ಸ್‌ಗಳ ಪದರಗಳಲ್ಲಿ ಚಿನ್ನದ ಪೇಸ್ಟ್‌ನಂತೆ 6.47 ಲಕ್ಷ ರೂ. ಮೌಲ್ಯದ 107 ಗ್ರಾಂ ಚಿನ್ನ ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಚಾರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next