Advertisement

Mangaluru ಡ್ರಗ್ಸ್‌ ಸೇವನೆ: 4 ದಿನಗಳಲ್ಲಿ 15 ಮಂದಿ ಸೆರೆ

12:40 AM Nov 07, 2023 | Team Udayavani |

ಮಂಗಳೂರು: ಮಂಗಳೂರು ಪೊಲೀಸರು ಡ್ರಗ್ಸ್‌ ವಿರುದ್ಧ ಕಾರ್ಯಾಚರಣೆ ಮುಂದುವರೆಸಿದ್ದು, ಡ್ರಗ್ಸ್‌ ಸೇವನೆ ಪ್ರಕರಣಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 15 ಮಂದಿಯನ್ನು ಬಂಧಿಸಿದ್ದಾರೆ.

Advertisement

ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಅವರು ಕೇಂದ್ರ ಉಪವಿಭಾಗದ ಎಸಿಪಿ ಮಹೇಶ್‌ ಕುಮಾರ್‌, ಉತ್ತರ ಉಪವಿಭಾಗದ ಎಸಿಪಿ ಮನೋಜ್‌ ಕುಮಾರ್‌ ನಾಯ್ಕ, ದಕ್ಷಿಣ ಉಪವಿಭಾಗದ ಎಸಿಪಿ ಧನ್ಯಾ ನಾಯಕ್‌ ಮತ್ತು ನಗರ ಅಪರಾಧ ಪತ್ತೆ ದಳದ ಎಸಿಪಿ ಪಿ.ಎ. ಹೆಗ್ಡೆ ಅವರ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದರು.

ಈ ತಂಡಗಳು ಲಾಡ್ಜ್, ಪಬ್‌, ಹೊಟೇಲ್‌, ಹೋಂ ಸ್ಟೇ, ರೆಸಾರ್ಟ್‌ ಮತ್ತು ವಿದ್ಯಾರ್ಥಿಗಳು ವಾಸವಾಗಿರುವ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ಗಳನ್ನು ಪರಿಶೀಲಿಸಿ 56 ಶಂಕಿತ ವ್ಯಕ್ತಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ವೈದ್ಯಕೀಯ ವರದಿಯ ಆಧಾರದಲ್ಲಿ 15 ಮಂದಿಯನ್ನು ಬಂಧಿಸಿವೆ. ಬಂಧಿತರಿಂದ 7 ಮೊಬೈಲ್‌ ಫೋನ್‌ಗಳು ಮತ್ತು 2 ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಎನ್‌ಡಿಪಿಎಸ್‌ ಕಾಯ್ದೆ ಸೆಕ್ಷನ್‌ 27 (ಬಿ) ಅಡಿಯಲ್ಲಿ 12 ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next