ಮಂಗಳೂರು: ಆರೋಗ್ಯ ಇಲಾಖೆ ವತಿಯಿಂದ ವಾರಕ್ಕೆ ಒಂದು ದಿನ ಪ್ರತಿ ಶುಕ್ರವಾರ “ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಮಾಡುವ ದಿನ” ಕಾರ್ಯಕ್ರಮದ ಭಾಗವಾಗಿ ಶುಕ್ರವಾರ ನಗರದ ಕೋಡಿಕಲ್ ನಲ್ಲಿ ನಡೆದ ಲಾರ್ವಾ ಸರ್ವೆ ಕಾರ್ಯದಲ್ಲಿ ಆರೋಗ್ಯ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸಿದರು.
ಇಲ್ಲಿನ ಬಾಪೂಜಿ ನಗರ ಪ್ರದೇಶದ ಕೆಲವು ಮನೆಗಳಿಗೆ ಭೇಟಿ ನೀಡಿದ ಸಚಿವ ಗುಂಡೂರಾವ್ ಅವರು, ಸಾರ್ವಜನಿಕರಿಗೆ ಡೆಂಗ್ಯೂ ಅಪಾಯದ ಕುರಿತು ಮಾಹಿತಿ ನೀಡಿದರು.
ಇದೇ ವೇಳೆ ಕೆಲವು ಮನೆಗಳಲ್ಲಿ ನೀರಿನ ಟಬ್, ಸಿಂಟೆಕ್ಸ್ ಟಾಂಕಿ, ಸಣ್ಣ ಬಕೆಟ್ ಗಳಲ್ಲಿ ಸೊಳ್ಳೆಯ ಲಾರ್ವಾಗಳು ಕಂಡು ಬಂದಿದ್ದು, ನೀರು ಸಂಗ್ರಹಿಸುವಾಗ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಪಂ ಸಿಇಒ ಡಾ| ಆನಂದ್ ಕೆ., ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್.ಆರ್. ತಿಮ್ಮಯ್ಯ ಮೊದಲಾದವರಿದ್ದರು.