ಮಂಗಳೂರು : ನಗರದ ಬಲ್ಮಠದ ಖಾಸಗಿ ಪದವಿ ಕಾಲೇಜಿನ ಜೂನಿಯರ್ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಪೊಲೀಸರು ಸೀನಿಯರ್ ಬ್ಯಾಚ್‌ನ 8 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಮೇ 28ರಂದು ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 28ರಂದು ಸಂಜೆ 4.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿತ್ತು. ಅನಂತರ ಸಭಾಂಗಣದ ಹೊರಗೆ ಗಲಾಟೆ ನಡೆದಿತ್ತು. ಆ ಬಳಿಕ ರಾತ್ರಿ 8.30ಕ್ಕೆ ಜೂನಿಯರ್ ಬ್ಯಾಚ್‌ನ ವಿದ್ಯಾರ್ಥಿಗಳು ಉಳಿದುಕೊಂಡಿದ್ದ ಚಿಲಿಂಬಿಯ ಅಪಾರ್ಟ್‌ಮೆಂಟ್‌ಗೆ ತೆರಳಿದ ಸೀನಿಯರ್ ಬ್ಯಾಚ್‌ನ 12 ಮಂದಿ ವಿದ್ಯಾರ್ಥಿಗಳು ಕೇರಳದ ಶಬಾಬ್ ಮತ್ತು ಇತರ ನಾಲ್ವರಿಗೆ ವಿಕೆಟ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳಾದ ಉಳ್ಳಾಲದ ಮೊಹಮ್ಮದ್ ಅಫ್ರೀಶ್ (21), ಪಾಂಡೇಶ್ವರದ ಸುನೈಫ್ (21), ಕಾಸರಗೋಡಿನ ಶೇಖ್ ಮೊಹಿದ್ದೀನ್ (20), ಕೋಟೆಕಾರ್‌ನ ಇಬ್ರಾಹಿಂ ರಾಜಿ (20), ಅಡ್ಕೂರಿನ ಮೊಹಮ್ಮದ್ ಸಿನಾನ್ ಅಬ್ದುಲ್ಲಾ (21), ಕೋಟೆಕಾರ್‌ನ ಮೊಹಮ್ಮದ್ ಅಶಾಮ್ (21), ಬಂದರಿನ ಮೊಹಮ್ಮದ್ ಅಫಾಮ್ ಅಸ್ಲಾಮ್ (20) ಮತ್ತು ಗುರುಪುರದ ಮೊಹಮ್ಮದ್ ಸೈಯದ್ ಅಫ್ರೀದ್ (21) ನನ್ನು ಬಂಧಿಸಲಾಗಿದೆ.
ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಅಮಿತಾ ಪ್ರಸಾದ್, ವಿಜಯಭಾಸ್ಕರ್, ರಮಣರೆಡ್ಡಿ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ