Advertisement
ಇತ್ತೀಚೆಗೆ ಕೆಲವು ತಿಂಗಳುಗಳಿಂದ ಎಂಡಿಎಫ್ ಹೆಸರಿನಲ್ಲಿ ಬುರ್ಖಾ ಧರಿಸುವಂತೆ ಮುಸ್ಲಿಂ ಯುವತಿಯರಿಗೆ ಕಟ್ಟೆಚ್ಚರಿಕೆ ನೀಡುವುದು, ಮಾಲ್‌ಗಳಲ್ಲಿ ತಿರುಗಾಡುವ ಮಕ್ಕಳ ಪೊಷಕರಿಗೂ ಎಚ್ಚರಿಕೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇನ್‌ಸ್ಟಾಗ್ರಾಂ ಪೇಜ್ ಮತ್ತು ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಈ ರೀತಿಯ ಹೇಳಿಕೆ ಹಾಕಲಾಗಿದೆ. ಈ ಮೆಸೇಜ್ ಯಾರು ಹಾಕಿದ್ದು ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ, ಇನ್ನೂ ದೂರು ದಾಖಲು ಮಾಡಿಲ್ಲ ಎಂದು ಅವರು ಸುದ್ದಿಗಾರರಿಗೆ ಗುರುವಾರ ತಿಳಿಸಿದರು.
ನಿರ್ದಿಷ್ಟವಾಗಿ ಯಾವುದೇ ಸಂಘಟನೆಯ ಸ್ವರೂಪವಿಲ್ಲದೆ ಸೋಶಿಯಲ್ ಮೀಡಿಯಾ ಮೂಲಕವೇ ಈ ಹೆಸರಿನಲ್ಲಿ ಕೆಲವರು ಕಾರ್ಯಾಚರಿಸುತ್ತಿದ್ದಾರೆ. ಈ ಹೆಸರಿನಲ್ಲಿ ಮೂಲಭೂತವಾದಿ ವಿಚಾರಗಳನ್ನು ಹರಿಯ ಬಿಡಲಾಗುತ್ತಿದೆ. ಬುರ್ಖಾ, ಹಿಜಾಬ್ ಧರಿಸಿ ಬರುವ ಮುಸ್ಲಿಂ ಯುವತಿಯರು ಅಸಭ್ಯ ವರ್ತನೆ ತೋರಿದರೆ ಮಾನ ಹರಾಜು ಹಾಕಲಿದ್ದೇವೆ ಎಂಬ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.