Advertisement

ಮಂಗಳೂರು: ಐ ಫೋನ್‌ ನೀಡುವುದಾಗಿ ಹಣ ಪಡೆದು ವಂಚನೆ

09:08 PM Apr 27, 2023 | Team Udayavani |

ಮಂಗಳೂರು: ಐ ಫೋನ್‌ ಮಾರಾಟದ ಬಗ್ಗೆ ಫೇಸ್‌ಬುಕ್‌ನಲ್ಲಿ ಜಾಹೀರಾತು ನೀಡಿ ಅನಂತರ ಹಣ ಪಡೆದು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್‌ (ಸೈಬರ್‌, ಆರ್ಥಿಕ ಮತ್ತು ಮಾದಕದ್ರವ್ಯ ಅಪರಾಧ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ದೂರುದಾರ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಐ ಫೋನ್‌ ಮಾರಾಟದ ಕುರಿತು ಜಾಹೀರಾತನ್ನು ನೋಡಿ ಅದನ್ನು ಖರೀದಿಸುವ ಉದ್ದೇಶದಿಂದ ಅದರಲ್ಲಿದ್ದ ಮೊಬೈಲ್‌ ಸಂಖ್ಯೆ 7548931374 ಕ್ಕೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ ಐ ಪೋನ್‌ನ್ನು 13,500 ರೂ.ಗಳಿಗೆ ಮಾರಾಟ ಮಾಡುತ್ತಿದ್ದು ಕೆಲವು ಆಫ‌ರ್‌ ನೀಡುವುದಾಗಿಯೂ 13,500 ರೂ.ಗಳನ್ನು ಗೂಗಲ್‌ ಪೇ ಮೂಲಕ ಪಾವತಿ ಮಾಡುವಂತೆಯೂ ತಿಳಿಸಿದ. ಇದನ್ನು ನಂಬಿದ ದೂರುದಾರ ವ್ಯಕ್ತಿ ಗೂಗಲ್‌ ಪೇ ಮೂಲಕ ಮೊದಲು 5,150 ರೂ. ವರ್ಗಾಯಿಸಿದರು.

ಬಳಿಕ ಅಪರಿಚಿತ ವ್ಯಕ್ತಿ ಕರೆ ಮಾಡಿ ಹಣ ಖಾತೆಗೆ ಬಂದಿಲ್ಲವೆಂದು ತಿಳಿಸಿದ್ದಾನೆ. ಮತ್ತೂಮ್ಮೆ ಹಣ ಪಾವತಿಸುವಂತೆ ತಿಳಿಸಿದ್ದಾನೆ. ಆ ಬಳಿಕ ಹಂತ ಹಂತವಾಗಿ ಮೋಸದಿಂದ 44,800 ರೂ. ವರ್ಗಾಯಿಸಿಕೊಂಡು ಐ ಫೋನ್‌ ನೀಡದೆ ವಂಚಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next