Advertisement

ಲಾರಿಯಿಂದ ಬಿದ್ದು ಗಾಯಗೊಂಡಿದ್ದ ಕಾರ್ಮಿಕನ ಬಗ್ಗೆ ನಿರ್ಲಕ್ಷ್ಯ: ಕಂಪೆನಿ ವಿರುದ್ಧ ದೂರು

11:08 PM Feb 16, 2023 | Team Udayavani |

ಮಂಗಳೂರು: ಕೆಲಸದ ವೇಳೆ ಲಾರಿಯಿಂದ ಕೆಳಗೆ ಬಿದ್ದು ಗಾಯಗೊಂಡ ಕಾರ್ಮಿಕನ ಬಗ್ಗೆ ನಿರ್ಲಕ್ಷ್ಯ ತಾಳಿದ ಕಂಪೆನಿ ವಿರುದ್ಧ ಸಾವಿತ್ರಿ ಎಂಬವರು ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ.

Advertisement

ಸಂಗಪ್ಪ ನಂದ್ಯಾಳ ಎಂಬವರು 4-5 ವರ್ಷಗಳಿಂದ ನಗರದ ಗೋದಾಮು ಒಂದರಲ್ಲಿ ಸಿಮೆಂಟ್‌ ಮೂಟೆ ಹೊರುವ ಕೆಲಸ ಮಾಡುತ್ತಿದ್ದು, ಜ.28ರಂದು ಮಧ್ಯಾಹ್ನ 1ಕ್ಕೆ ಯೆಯ್ನಾಡಿಯಲ್ಲಿ ಲಾರಿಯಿಂದ ಸಿಮೆಂಟ್‌ ಅನ್‌ಲೋಡ್‌ ಮಾಡುತ್ತಿರುವಾಗ ಆಯತಪ್ಪಿ ಕೆಳಗಡೆ ಬಿದ್ದು ಗಾಯಗೊಂಡಿದ್ದರು.

ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ವೆನ್ಲಾಕ್ ಆಸ್ಪತೆಯಲ್ಲಿ 2 ದಿನ ಚಿಕಿತ್ಸೆ ಕೊಡಿಸಿ ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸುಮಾರು 45,000 ರೂ. ಖರ್ಚು ಆಗಿದ್ದು, ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಹಾಗೂ ವಿಶ್ರಾಂತಿಯಲ್ಲಿರುವ ಸಮಯದ ಸಂಬಳವನ್ನು ಕೊಡುವುದಾಗಿ ಮಾಲಕರು ತಿಳಿಸಿದ್ದರು. ಆದರೆ ಕೇವಲ 15,000 ರೂ. ನೀಡಿದ್ದು, ಕೆಲಸದ ವೇಳೆ ಸುರಕ್ಷತಾ ಸಾಮಾಗ್ರಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next