Advertisement
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರದೀಪ್ ಸಿಂಗ್ ಎಸ್.ಪುರಿ ಗುರುವಾರ ದೇಶದ ನಗರಗಳ ಸೂಚ್ಯಂಕ ಘೋಷಿಸಿದರು.
Related Articles
Advertisement
ಸುಲಲಿತ ಜೀವನ ಸೂಚ್ಯಂಕದಲ್ಲಿ, ಆಡಳಿತ, ಸಂಸ್ಕೃತಿ, ಶಿಕ್ಷಣ, ಆರೋಗ್ಯ, ಸುರಕ್ಷತೆ, ಆರ್ಥಿಕತೆ, ವಸತಿ, ಭೂ ಬಳಕೆ ಯೋಜನೆ, ಸಾರ್ವಜನಿಕ ಮುಕ್ತ ಸ್ಥಳಗಳು, ಸಾರಿಗೆ ಮತ್ತು ಚಲನಶೀಲತೆ ಸೇರಿದಂತೆ 15 ಮೌಲ್ಯಮಾಪನ ಮಾನದಂಡಗಳ ಆಧಾರದ ಮೇಲೆ ನಗರಗಳು ಸ್ಥಾನ ಪಡೆದಿವೆ.
ಇದನ್ನೂ ಓದಿ: ವಿಶ್ಲೇಷಣೆ: ಡಿಎಂಕೆಗೆ ನಡುಕ ದಿನಕರನ್ ಗೆ ಶಾಕ್, ಶಶಿಕಲಾ ನಿರ್ಧಾರದ ಹಿಂದೆ ತಂತ್ರಗಾರಿಕೆ?
ಒಂದು ಮಿಲಿಯನ್ ಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನ ಪಡೆದರೆ, ಪುಣೆ ಎರಡನೇ ಸ್ಥಾನ ಪಡೆದಿದೆ. ಮಿಲಿಯನ್ ಗಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಶಿಮ್ಲಾ ಮೊದಲ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಮಂಗಳೂರು 20ನೇ ಸ್ಥಾನ ಪಡೆದುಕೊಂಡಿದೆ.