Advertisement
ನ್ಯಾಯಾಲಯದ ಪ್ರಕರಣಗಳು ಇತ್ಯರ್ಥವಾಗಿರುವ, 2019ರ ಡಿಸೆಂಬರ್‌ನಲ್ಲಿ ಅಧಿಕಾರ ಅವಧಿ ಮುಕ್ತಾಯ ವಾಗುತ್ತಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸುವ ಸಂಬಂಧ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುವ ಬಗ್ಗೆ ರಾಜ್ಯ ಚುನಾವಣ ಆಯೋಗವು ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಸೆ.13ರಂದು ಕೋರಿತ್ತು.
ಮತದಾನ ಪಟ್ಟಿ, ಮತದಾನ ಕೇಂದ್ರ ಗಳ ಪಟ್ಟಿ ಸಿದ್ಧಪಡಿಸುವುದು, ಮತದಾನ ಸಿಬಂದಿ ನೇಮಕ, ಇವಿಎಂಗಳ ಸಂಗ್ರಹ ಮಾಡಿ ಸಿದ್ಧಪಡಿಸಿಕೊಳ್ಳುವುದು ಹಾಗೂ ಚುನಾವಣಾಧಿಕಾರಿಗಳ ನೇಮಕ ಮಾಡಲು ಪಟ್ಟಿ ತಯಾರಿಸಿ ಸಲ್ಲಿಸುವಂತೆ ರಾಜ್ಯ ಚುನಾವಣ ಆಯೋಗ ತಿಳಿಸಿದೆ. ಮಹಾ ನಗರ ಪಾಲಿಕೆಯ ಪ್ರತಿ 5 ವಾರ್ಡ್‌ಗೆ ಉಪವಿಭಾಗಾಧಿಕಾರಿ ಅಥವಾ ತತ್ಸಮಾನ ಹುದ್ದೆಯ ಓರ್ವ ಅಧಿಕಾರಿ ಯನ್ನು ನೇಮಕ ಮಾಡಲು ಪಟ್ಟಿ ತಯಾರಿಸಿ ಸಲ್ಲಿಸುವಂತೆ ಆಯೋಗ ಕೋರಿದೆ. ಈ ಎಲ್ಲ ಕಾರಣದಿಂದ ಜಿಲ್ಲಾಡಳಿತ ಇದಕ್ಕೆ ಸ್ಪಂದಿಸುವ ನೆಲೆಯಲ್ಲಿ ಎಲ್ಲ ಸಿದ್ಧತೆಗಳನ್ನು ಪ್ರಾರಂಭಿಸಿದೆ.
ಚುನಾವಣ ಆಯೋಗವು ಪಾಲಿಕೆ ಚುನಾವಣೆಗೆ ಮುನ್ಸೂಚನೆ ನೀಡು ತ್ತಿದ್ದಂತೆ ಇತ್ತ ರಾಜಕೀಯ ಪಕ್ಷಗಳಲ್ಲಿ ಲೆಕ್ಕಾ ಚಾರಗಳು ಶುರುವಾಗಿವೆ. ಈಗಾಗಲೇ ಪ್ರಕಟವಾಗಿರುವ ಮೀಸಲಾತಿ, ಅದರನ್ವಯ ಸ್ಪರ್ಧೆಯ ಅವಕಾಶದ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷದ ವರಿಷ್ಠರಲ್ಲಿ ಆಕಾಂಕ್ಷಿಗಳು ಮಾತುಕತೆ ನಡೆಸಲು ಆರಂಭಿಸಿದ್ದಾರೆ. ಈ ಮಧ್ಯೆ ಪ್ರಮುಖವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ವರಿಷ್ಠರು ಈಗಾ ಗಲೇ ಕೆಲವು ಸುತ್ತಿನ ಆಂತರಿಕ ಸಭೆ ನಡೆಸಿ 60 ವಾರ್ಡ್‌ಗಳಲ್ಲಿ ಯಾರ ಸ್ಪರ್ಧೆಗೆ ಅವಕಾಶ ಎಂಬ ಕುರಿತಂತೆ ಪ್ರಾಥಮಿಕವಾಗಿ ಚರ್ಚಿಸಿದ್ದಾರೆ. ಆದರೆ ಯಾವುದೂ ಕೂಡ ಅಂತಿಮವಾಗಿಲ್ಲ. ಉಳಿದಂತೆ ಜೆಡಿಎಸ್, ಎಸ್‌ಡಿಪಿಐ ಕೂಡ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಆಸಕ್ತಿ ತೋರಿದೆ.
Related Articles
Advertisement
ಮೀಸಲಾತಿ ವಿಚಾರ; ಚುನಾವಣೆ ತಡವಾಗಲು ಕಾರಣ
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ರಾಜ್ಯ ನಗರಾಭಿವೃದ್ಧಿ ಇಲಾಖೆಯು ಸಲ್ಲಿಸಿದ್ದ ಮಂಗಳೂರು ಪಾಲಿಕೆಯ ಅಂತಿಮ ಮೀಸಲು ಪಟ್ಟಿಯಲ್ಲಿ ಆವರ್ತನ ಪದ್ಧತಿ (ರೊಟೇಶನ್ ಪದ್ಧತಿ)ಯನ್ನು ಸರಿಯಾಗಿ ಅನುಸರಿಸಿಲ್ಲ ಎಂದು ಪ್ರಶ್ನಿಸಿ ಕೆಲವರು ರಾಜ್ಯ ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠ ಹೊಸ ಮೀಸಲು ಪಟ್ಟಿ ಸಲ್ಲಿಸುವಂತೆ ಸರಕಾರಕ್ಕೆ ಈ ಹಿಂದೆ ಸೂಚಿಸಿತ್ತು. ಆದರೆ ಏಕಸದಸ್ಯ ಪೀಠದ ತೀರ್ಪಿನ ವಿರುದ್ಧ ರಾಜ್ಯ ಸರಕಾರ ದ್ವಿಸದಸ್ಯ ಪೀಠಕ್ಕೆ ಮೇಲ್ಮ ನವಿ ಸಲ್ಲಿಸಿತ್ತು. ಹೈಕೋರ್ಟ್ ದ್ವಿಸ ದಸ್ಯ ಪೀಠದಲ್ಲಿ ವಿಚಾರಣೆ ನಡೆದು ಮೇ 31ರಂದು ಇದನ್ನು ವಜಾ ಮಾಡಿತ್ತು. ಈ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಕೆಲವು ಅರ್ಜಿದಾರರು ಮತ್ತೆ ಹೈಕೋರ್ಟ್ ಕದ ತಟ್ಟಿದ್ದು, ವಿಚಾರಣೆ ಸದ್ಯ ನಡೆಯುತ್ತಿದೆ. ಈ ಮಧ್ಯೆ, ಕೆಲವರು ಮತ್ತೆ ನ್ಯಾಯಾ ಲಯ ದಲ್ಲಿ ಪ್ರತ್ಯೇ ಕವಾಗಿ ಅರ್ಜಿ ಹಾಕಿ ಚುನಾ ವಣೆ ನಡೆ ಯ ದಿರುವುದನ್ನು ಪ್ರಶ್ನಿ ಸಿ ದ್ದರು. ಹೀಗಾಗಿ ನ. 15ರೊಳಗೆ ಚುನಾ ವಣಪ್ರಕ್ರಿಯೆ ಪೂರ್ಣ ಗೊಳಿಸುವಂತೆ ಚುನಾ ವಣ ಆಯೋಗಕ್ಕೆ ಆ. 28ರಂದು ಹೈಕೋರ್ಟ್‌ಆದೇಶಿಸಿದೆ. ಮಾ. 7ಕ್ಕೆ ಅಧಿಕಾರಾವಧಿ ಪೂರ್ಣ
ಮಹಾನಗರ ಪಾಲಿಕೆಯ ಅಧಿಕಾರಾವಧಿ 2019ರ ಮಾ. 7ಕ್ಕೆ ಅಂತ್ಯಗೊಂಡಿತ್ತು. ಆದರೆ ವಾರ್ಡ್ ಮೀಸಲಾತಿ ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಚುನಾವಣೆ ನಡೆದಿರಲಿಲ್ಲ. ಮಹಾನಗರ ಪಾಲಿಕೆ ಒಟ್ಟು 60 ವಾರ್ಡ್‌ಗಳನ್ನು ಒಳಗೊಂಡಿದೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ 35, ಬಿಜೆಪಿ 20, ಜೆಡಿಎಸ್ 2, ಸಿಪಿಎಂ 1, ಎಸ್‌ಡಿಪಿಐ 1, ಪಕ್ಷೇತರ 1 ಸ್ಥಾನ ಪಡೆದಿದ್ದರು.