Advertisement

Mangaluru ಸಿಸಿಬಿ ಕಾರ್ಯಾಚರಣೆ ; ದರೋಡೆಗೆ ಸಂಚು: ಮೂವರ ಸೆರೆ

12:02 AM Jun 10, 2024 | Team Udayavani |

ಮಂಗಳೂರು: ಉಳ್ಳಾಲ ಮುಕ್ಕಚ್ಚೇರಿ ಪರಿಸರದಲ್ಲಿ ಶ್ರೀಮಂತ ವ್ಯಕ್ತಿಗಳನ್ನು, ವ್ಯಾಪಾರಸ್ಥ ರನ್ನು ದರೋಡೆ ಮಾಡಲು ಸಂಚು ರೂಪಿಸುತ್ತಿದ್ದ ಮೂವರು ಕುಖ್ಯಾತರನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ.

Advertisement

ಉಳ್ಳಾಲ ಮುಕ್ಕಚ್ಚೇರಿ ಕಿಲಿರಿಯ ನಗರ ನಿವಾಸಿ ಮುಹಮ್ಮದ್‌ ಸಮೀರ್‌ ಅಲಿ ಯಾನೆ ಕಡಪರ ಸಮೀರ್‌ (33), ಬೋಳಿಯಾರು ಕಾಪಿಕಾಡ್‌ ಹೌಸ್‌ ನಿವಾಸಿ ಮೊಹಮ್ಮದ್‌ ಮನ್ಸೂರ್‌ ಯಾನೇ ಬೋಳಿಯಾರು ಮನ್ಸೂರು (30), ಕೊಣಾಜೆ ಗ್ರಾಮ ಚಾವಡಿ ಬಳಿ ಬದ್ರಿಯಾ ನಗರ ನಿವಾಸಿ ಮೊಹಮ್ಮದ್‌ ನೌಷಾದ್‌ (30) ಬಂಧಿತರು.

ಈ ಹಿಂದೆ ಕೊಲೆ, ಕೊಲೆಯತ್ನ, ದರೋಡೆ, ಮಾದಕ ವಸ್ತು ಮಾರಾಟ ಹಾಗೂ ಇತರ ಪ್ರಕರಣಗಳಲ್ಲಿ ಭಾಗಿ ಯಾಗಿರುವ ಆರೋಪಿಗಳ ತಂಡ ಮುಕ್ಕಚ್ಚೇರಿ ಪರಿಸರದಲ್ಲಿಗೆ ಹೊಂಚು ಹಾಕುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.

25.90 ಲಕ್ಷ ರೂ. ಸೊತ್ತು ವಶ
ಆರೋಪಿಗಳಿಂದ 1 ತಲವಾರು, 1 ಚೂರಿ, 3 ಮೊಬೈಲ್‌ ಫೋನುಗಳು ಹಾಗೂ ಜೀಪ್‌ ಸಹಿತ 25,90,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಗಳ ವಿರುದ್ಧ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿ ತಲೆಮರೆಸಿಕೊಂಡಿದ್ದು ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಬಿ ಘಟಕದ ಶ್ಯಾಮ್‌ ಸುಂದರ್‌ ಎಚ್‌.ಎಂ., ಸುದೀಪ್‌ ಎಂ.ವಿ., ಶರಣಪ್ಪ ಎಸ್‌. ಭಂಡಾರಿ ಮತ್ತು ಸಿಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next