Advertisement
ವಿಕ್ಟರ್ ದಂಪತಿಗಳು, ತಾವಿಬ್ಬರೇ ಮನೆಯಲ್ಲಿದ್ದರೂ ನೆರೆಮನೆಯವರ ಜತೆ ನಿಕಟ ಸಂಪರ್ಕವನ್ನು ಹೊಂದಿದ್ದರು. ಈ ಮಧ್ಯೆಯೂ ಸೋಮವಾರ ಮಧ್ಯಾಹ್ನ ವೇಳೆ ಓರ್ವ ಅಪರಿಚಿತ ವ್ಯಕ್ತಿ ಅವರ ಮನೆ ಬಳಿ ಬಂದು “ಎಕ್ಸ್‌ಕ್ಯೂಸ್ ಮಿ’ ಎಂದಿದ್ದ. ಆದರೆ ಅದಕ್ಕೆ ಇವರು ಏನನ್ನೂ ಪ್ರತಿಕ್ರಿಯಿಸಿರಲಿಲ್ಲ.
Related Articles
Advertisement
ವಿಕ್ಟರ್ ಮೆಂಡೋನ್ಸ ಅವರ ಮೊಣಕಾಲಿಗೆ ಬಲವಾಗಿ ಹಲವಾರು ಬಾರಿ ಹೊಡೆದಿದ್ದರು. ಪೆಟ್ರೇಶಿಯ ಅವರ ಕೈ, ಎದೆ, ಬೆನ್ನಿಗೆ ಸೂð ಡ್ರೈವರ್‌ನಿಂದ ತಿವಿದಿದ್ದರು. ಎರಡು ಕಪಾಟುಗಳಿಗೆ ಬೀಗ ಹಾಕಿರಲಿಲ್ಲ. ಇನ್ನೊಂದು ಕಪಾಟಿನ ಬೀಗವನ್ನೂ ಕೇಳಿದ್ದರು. ಸಿಗದಿದ್ದಾಗ ಸೂð ಡ್ರೈವರ್‌ನಿಂದಲೇ ಕಪಾಟು ತೆರೆದು ಚಿನ್ನಾಭರಣ ದೋಚಿದ್ದರು.
ಕಾರಿನ ಕೀ ಎಲ್ಲಿದೆ ಎಂದು ಕೇಳಿದ ದರೋಡೆಕೋರರು ಅಲ್ಲಿಯೇ ಡೈನಿಂಗ್ ಟೇಬಲ್ ಬಳಿಯಿದ್ದ ಡ್ರಾವರ್ ತೆಗೆದು ಕೀ ನೊಂದಿಗೆ ಹೊರಬಂದರು. ಓರ್ವ ದರೋಡೆಕೋರ ಮುಖ್ಯ ದ್ವಾರದಿಂದ ಮನೆಯ ಹೊರಗೆ ಹೋಗಿ ಕಾರನ್ನು ಸ್ಟಾರ್ಟ್ ಮಾಡಿ ರಸ್ತೆಗೆ ಕೊಂಡೊಯ್ದು ನಿಲ್ಲಿಸಿದ್ದ. ಅನಂತರ ಮನೆಯೊಳಗಿದ್ದ ಇತರ ಮೂವರರೂ ಕಾರಿನೊಳಗೆ ಕುಳಿತು ಪರಾರಿಯಾಗಿದ್ದರು. ಸ್ಥಳಕ್ಕೆ ಡಿಸಿಪಿ ದಿನೇಶ್ ಕುಮಾರ್, ಸ್ಥಳೀಯ ಕಾರ್ಪೊರೇಟರ್ ಶಶಿಧರ ಹೆಗ್ಡೆ, ವಂ| ಮೈಕೆಲ್ ಸಾಂತುಮಯೊರ್ ಮೊದಲಾದವರು ಭೇಟಿ ನೀಡಿದ್ದಾರೆ. ಕಾರುಬಿಟ್ಟು ತೆರಳಿದ್ದರು !
ಮೂಲ್ಕಿ: ದರೋಡೆಕೋರರು ತಾವು ಪರಾರಿಯಾಗಿದ್ದ ಕಾರನ್ನು ಮುಂಜಾವ 5 ಗಂಟೆಯ ಸುಮಾರಿಗೆ ಮೂಲ್ಕಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗೂಡಂಗಡಿಯೊಂದರ ಬಳಿ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿ ಪರಾರಿಯಾಗಿದ್ದರು. ಕಾರಿನ ಕೀ ಗೂಡಂಗಡಿಯ ಕಸದ ಬಕೆಟ್‌ನಲ್ಲಿ ಪತ್ತೆಯಾಗಿತ್ತು. ಮೂಲ್ಕಿ ಪೊಲೀಸರು ಬಪ್ಪನಾಡು ಬಳಿ ಹೆದ್ದಾರಿಯಲ್ಲಿ ವಾಹನಗಳ ತಪಾಸಣೆಯಲ್ಲಿ ತೊಡಗಿದ್ದರಿಂದ ದರೋಡೆ ಕೋರರು ವಾಹನವನ್ನು ಸರ್ವೀಸ್ ರಸ್ತೆ ಬಳಿ ತಿರುಗಿಸಿದ್ದರೆನ್ನಲಾಗಿದೆ.
ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಚಡ್ಡಿ ಗ್ಯಾಂಗ್‌ನಿಂದ ಕಳ್ಳತನ, ದರೋಡೆ ನಡೆಯುತ್ತಿರುವ ಬಗ್ಗೆ ಉದಯವಾಣಿ ಸೋಮ ವಾರ ಪ್ರಕಟಿಸಿದ್ದ ವರದಿಯನ್ನು ಗಮನಿಸಿದ್ದೆವು. ಈ ಬಗ್ಗೆ ರಾತ್ರಿ ಮಲಗುವ ಮೊದಲೂ ಚರ್ಚಿಸಿದ್ದೆವು. ಮನೆ ಭದ್ರ ವಾಗಿದ್ದು, ಸಿಸಿ ಕೆಮರಾಗಳು ಹಾಗೂ ಪೊಲೀಸರ ಗಸ್ತಿದೆ ಎಂದುಕೊಂಡು ಮಲಗಿದ್ದೆವು. ಹೀಗೆ ಆದೀತು ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಜನರು ಜಾಗ್ರತರಾಗಿರ ಬೇಕು ಎನ್ನುತ್ತಾರೆ ವಿನ್ಸೆಂಟ್ ಮತ್ತು ಪೆಟ್ರೀಶಿಯ ದಂಪತಿ. ಕನಸು ಎಂದುಕೊಂಡಿದ್ದೆ
ದರೋಡೆಕೋರರು ಬೆಡ್‌ರೂಮ್‌ಗೆ ಬರುವವರೆಗೂ ಗೊತ್ತಾಗಿರಲಿಲ್ಲ. ಗಾಢ ನಿದ್ದೆಯಲ್ಲಿದ್ದೆ. ಕಣ್ಣೆದುರು ನಾಲ್ವರು ನಿಂತಿದ್ದರು. ನಾನು ಅದು ಕನಸು ಅಂದುಕೊಂಡಿದ್ದೆ. ಬಳಿಕ ಬೊಬ್ಬೆ ಹೊಡೆದೆ. ಆಗ ದರೋಡೆಕೋರರು ರಾಡ್ ತೋರಿಸಿ “ಸೈಲೆಂಟ್’ ಎಂದರು. ಹಣ-ಬಂಗಾರ ಕೊಡಿ ಎಂದರು. ಬಳಿಕ ಹೊಡೆದರು. ನನ್ನನ್ನು ಅಲ್ಲಿಂದ ಏಳುವುದಕ್ಕೂ ಬಿಡಲಿಲ್ಲ.
– ವಿಕ್ಟರ್ ಮೆಂಡೋನ್ಸ,
ಹಲ್ಲೆಗೊಳಗಾದ ಮನೆಯ ಯಜಮಾನ