Advertisement
ಸೋಮವಾರ ತಮ್ಮ ಕಚೇರಿಯಲ್ಲಿ ಬೀಚ್‌ನ ಅಭಿವೃದ್ಧಿ ಮತ್ತು ನಿರ್ವಹಣೆಯ ಟೆಂಡರ್‌ಗೆ ಸಂಬಂಧಿಸಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿ, ಬ್ಲೂ ಫ್ಲ್ಯಾಗ್ ಬೀಚ್ ಮಾನ್ಯತೆ ಒಂದು ಋತು ಅವಧಿಗೆ ಸೀಮಿತವಾಗಿರುತ್ತದೆ.ಬಳಿಕ ಅದರ ನಿರ್ವಹಣೆ ಆಧರಿಸಿ ಮಾನ್ಯತೆ ಮುಂದುವರಿಸಲಾಗುತ್ತದೆ. ಹಾಗಾಗಿ ಸರಿಯಾಗಿ ನಿರ್ವಹಿಸದ ಸಂಸ್ಥೆ ಗಳನ್ನು ಬದಲಾಯಿಸಲಾಗುವುದು.
ತಣ್ಣೀರುಬಾವಿಯ ಮೊದಲನೇ ಬೀಚ್‌ನಲ್ಲಿ ರಾತ್ರಿ 9.30ರ ವರೆಗೆ ಸಾರ್ವಜ ನಿಕರಿಗೆ ತಂಗಲು ಅವಕಾಶವಿದೆ. ಆದರೆ ಬ್ಲೂ ಫ್ಲ್ಯಾಗ್ ಆಗಿ ಗುರುತಿಸಿದ ಬೀಚ್‌ನಲ್ಲಿ ಸಂಜೆ 6.30ರ ವರೆಗೆ ಮಾತ್ರ ಅವಕಾಶವಿದ್ದು, ಈ ಅವಧಿಯನ್ನು ಹೆಚ್ಚಿಸಬೇಕು. ಪಾರ್ಕಿಂಗ್ ಸ್ಥಳ ವಿಸ್ತರಿಸಬೇಕು. ರಸ್ತೆ ಸಂಪರ್ಕ ವ್ಯವಸ್ಥೆ ಉತ್ತಮ ಪಡಿಸಬೇಕು. ಬೆಳಕಿನ ವ್ಯವಸ್ಥೆ ಸುಧಾರಣೆ ಸೇರಿದಂತೆ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಬಿಡ್ಡುದಾ ರರು ಕೋರಿದರು. ಈ ಬೇಡಿಕೆ ಗಳ ಬಗ್ಗೆ ಗಮನ ಹರಿಸುವುದಾಗಿ ಡಿಸಿ ತಿಳಿಸಿದರು.
Related Articles
ಬೀಚ್ ಬಳಿಯ ರಸ್ತೆಗಳು, ಹೆದ್ದಾರಿ ಪಕ್ಕ ಸಹಿತ ಅಲ್ಲಲ್ಲಿ ಟ್ಯಾಂಕರ್‌ಗಳ ನಿಲುಗಡೆಯಿಂದ ಸುಗಮ ಸಂಚಾರಕ್ಕೆ ತೊಡಕಾಗಿದೆ ಎಂದು ಬಿಡ್ಡುದಾರರು ಡಿಸಿ ಯವರ ಗಮನ ಸೆಳೆದಾಗ, ಎನ್‌ಎಂಪಿಎಯಿಂದ ಟ್ಯಾಂಕರ್ ಟರ್ಮಿನಲ್ ನಿರ್ಮಿಸುವ ಯೋಜನೆ ಇದೆ. ಆ ಯೋಜನೆ ಅನುಷ್ಠಾನಗೊಂಡ ಬಳಿಕ ರಸ್ತೆ ಬದಿ ಟ್ಯಾಂಕರ್‌ಗಳ ನಿಲುಗಡೆಯನ್ನು ನಿಷೇಧಿಸುವುದಾಗಿ ಡಿಸಿ ತಿಳಿಸಿದರು.
Advertisement
10 ವರ್ಷಗಳ ನಿರ್ವಹಣೆ10 ವರ್ಷಗಳ ನಿರ್ವಹಣೆಗಾಗಿ ಟೆಂಡರ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ತಣ್ಣೀರುಬಾವಿ ಬೀಚ್‌ಗೆ 2023ರಲ್ಲಿ 12.2 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಸೀಸನ್‌ನಲ್ಲಿ ದಿನವೊಂದಕ್ಕೆ 5,010 ಮಂದಿಯ ಭೇಟಿ ನಿರೀಕ್ಷಿಸಲಾಗುತ್ತದೆ. 1 ಎಕ್ರೆ ಸ್ಥಳವನ್ನು ಬ್ಲೂ ಫ್ಲ್ಯಾಗ್ ಬೀಚ್ ಪಾರ್ಕಿಂಗ್‌ಗೆ ಮೀಸಲಿಡಲಾಗುತ್ತಿದೆ. ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಸುವ್ಯವಸ್ಥಿತವಾದ ಸ್ಥಳಾವಕಾಶವಿರುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕ ಚೇತನ್ ಅವರು ತಿಳಿಸಿದರು. ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಾಣಿಕ್ಯ ಉಪಸ್ಥಿತರಿದ್ದರು. ಉತ್ತಮ ಸ್ಪಂದನೆ
ಬ್ಲೂ ಫ್ಲ್ಯಾಗ್ ಬೀಚ್ ಪ್ರಾಜೆಕ್ಟ್ ಮತ್ತು ಸ್ಮಾರ್ಟ್ ಸಿಟಿ ಪ್ರಾಜೆಕ್ಟ್‌ನಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಇದನ್ನು ಪ್ರವಾಸಿತಾಣವಾಗಿ ರೂಪಿಸಲು ಟೆಂಡರ್ ಕರೆಯಲಾಗಿದೆ. ಮುಂಬಯಿ ಸಹಿತ ಹಲವರಿಂದ ಉತ್ತಮ ಸ್ಪಂದನೆ ದೊರೆತಿದೆ. 10 ವರ್ಷಗಳ ಅವಧಿಗೆ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಟೆಂಡರ್ ನೀಡಲಾಗುವುದು. ಸುಲ್ತಾನ್ ಬತ್ತೇರಿ -ಬೆಂಗ್ರೆ ಮಧ್ಯೆ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರಕಾರ ಅನುಮೋದಿಸಿದ್ದು, ಇದು ನಿರ್ಮಾಣವಾದ ಬಳಿಕ ಬ್ಲೂಫ್ಲ್ಯಾಗ್ ಬೀಚ್‌ಗೆ ಹೆಚ್ಚಿನ ಅನುಕೂಲವಾಗಲಿದೆ. -ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ