Advertisement
ಮೃತಪಟ್ಟಿರುವ ಅಧಿಕಾರಿ ಚೀಫ್ ಕಂಪ್ಲೇಂಟ್ ಆಫೀಸರ್ ಆಗಿದ್ದ ವಾದಿರಾಜ ಆಚಾರ್ಯ(55) ಎನ್ನುವವರಾಗಿದ್ದಾರೆ. ಹೊಟ್ಟೆ ಮತ್ತು ಕುತ್ತಿಗೆ ಮೇಲೆ ಕೊಯ್ದಿರುವ ಗಾಯದೊಂದಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಘಟನೆ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಪ್ರತಿಕ್ರಿಯೆ ನೀಡಿದ್ದು ‘ ಕಾರ್ಕಳ ಮೂಲದ ವಾದಿರಾಜ ಆಚಾರ್ಯ ಅವರು ನಾಲ್ಕು ವರ್ಷದಿಂದ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದಿಂದ ಇಲ್ಲಿ ಬಾಡಿಗೆ ಮನೆಯಲ್ಲಿದ್ದರು. ಕರ್ನಾಟಕ ಬ್ಯಾಂಕ್ ನಲ್ಲಿ ಚೀಫ್ ಕಂಪ್ಲೇಂಟ್ ಆಫೀಸರ್ ಆಗಿದ್ದರು. ಅವರ ಪತ್ನಿ ಮಕ್ಕಳ ಜತೆ ಶಾಲೆಯಲ್ಲಿ ಪೋಷಕರ ಸಭೆಗೆ ತೆರಳಿದ್ದರು, ಹೀಗಾಗಿ ಒಬ್ಬರೇ ಮನೆಯಲ್ಲಿದ್ದ ವೇಳೆ ಘಟನೆ ನಡೆದಿದೆ. ಕಾರು ಚಾಲಕ ಮನೆಗೆ ಬಂದು ನೋಡಿದಾಗ ವಾದಿರಾಜ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತತ್ ಕ್ಷಣ ಅಪಾರ್ಟ್ಮೆಂಟ್ ನಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಗಾಯವಾಗಿದ್ದರಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಜ ಮನೆಯವರು ನೀಡುವ ದೂರಿನ ಮೇಲೆ FIR ದಾಖಲು ಮಾಡುತ್ತೇವೆ. ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಆ ಬಳಿಕ ಯಾವ ಕಾರಣಕ್ಕೆ ಈ ಸಾವಾಗಿದೆ ಎಂದು ಹೇಳಬಹುದು ಎಂದರು.
Related Articles
Advertisement
ಮಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Movies: ಬೆಳಕಿನ ಹಬ್ಬಕ್ಕೆ ಥಿಯೇಟರ್ ತುಂಬಾ ಸಿನಿಮಾ.. ಇಲ್ಲಿದೆ ರಿಲೀಸ್ ಪಟ್ಟಿ