Advertisement

Mangaluru ಆ.8-10: ಗೋಡಂಬಿ ಸಮ್ಮೇಳನ

11:41 PM Aug 07, 2024 | Team Udayavani |

ಮಂಗಳೂರು: ಅಖಿಲ ಭಾರತ ಗೋಡಂಬಿ ಸಂಘ-ಎಐಸಿಎ ವತಿಯಿಂದ ಎಐಸಿಎ ಗೋಡಂಬಿ ಸಮ್ಮೇಳನ ಆ.8ರಿಂದ ಆ.10ರ ವರೆಗೆ ಬೆಂಗಳೂರು ಮಾನ್ಯತಾ ಬಿಸಿನೆಸ್‌ ಪಾರ್ಕ್‌ನಲ್ಲಿ ನಡೆಯಲಿದೆ.

Advertisement

ಎಐಸಿಎ, ಕ್ಯಾಶ್ಯೂ ಇನಾರ್ಮೇಶನ್‌ ಡಾಟ್‌ ಕಾಮ್‌ ಹಾಗೂ ಅಪೆಡಾ ಸಹಯೋಗದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಅಪೇಡಾ ಅಧ್ಯಕ್ಷ ಅಭಿಷೇಕ್‌ದೇವ್‌ ಮುಖ್ಯ ಅತಿಥಿಯಾಗಿದ್ದು, ಆ.8ರಂದು ಸಂಜೆ ಉದ್ಘಾಟನೆ ನೆರವೇರಿಸುವರು.

ಅಪೆಡಾ ನಿರ್ದೇಶಕ ಡಾ| ತರುಣ್‌ ಬಜಾಜ್‌, ಗೋಡಂಬಿ ಹಾಗೂ ಕೊಕೊ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕಿ ಡಾ| ಫೆಮಿನಾ, ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ ಸಲಹೆಗಾರ ಡಾ| ಅಲ್ಕಾ ರಾವ್‌, ಭಾರತೀಯ ಬೀಜಗಳು ಹಾಗೂ ಒಣಹಣ್ಣು ಸಮಿತಿ ಅಧ್ಯಕ್ಷ ಗುಂಜನ್‌ ಜೈನ್‌, ಎಇಸಿ-ಸಿಐ ಅಧ್ಯಕ್ಷ ಅಲೆಕ್ಸ್‌ ಎನ್‌ಗುಯೆಶಿಯಾ ಅಸೌಮಾನ್‌ ಪಾಲ್ಗೊಳ್ಳುವರು.

ಮೂರು ದಿನಗಳ ಸಮ್ಮೇಳನದಲ್ಲಿ ಯಂತ್ರೋಪಕರಣಗಳ ಪ್ರದರ್ಶನ, ಅಲ್ಲದೆ ಪೂರೈಕೆದಾರರಿಗೆ ಬೇಕಾದ ಸೇವೆ
ಗಳ ಪ್ರದರ್ಶನ, ವಿವಿಧ ಬಗೆಯ ಗೋಡಂಬಿ ಪ್ರದರ್ಶನವೂ ನಡೆಯಲಿದೆ.

ಭಾರತೀಯ ಗೋಡಂಬಿ ಕ್ಷೇತ್ರ ಕುರಿತಂತೆ ಗೋಡಂಬಿ ಬೆಳೆ ಹೆಚ್ಚಿಸುವುದು, ತಾಂತ್ರಿಕ ಸುಧಾರಣೆ ಮತ್ತು ಗೋಡಂಬಿ ಫ್ಯಾಕ್ಟರಿಗಳನ್ನು ಸ್ಪರ್ಧಾತ್ಮಕ ಗೊಳಿಸುವುದು, ಭಾರತದಲ್ಲಿ ಗೋಡಂಬಿ ಬಳಕೆ ಕುರಿತು ಅರಿವು ಮೂಡಿಸುವ ಉದ್ದೇಶಗಳನ್ನು ಹೊಂದಿದೆ. 40ಕ್ಕೂ ಅಧಿಕ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡು ಮಾತನಾಡಲಿದ್ದಾರೆ. 600ರಷ್ಟು ಪ್ರತಿನಿಧಿಗಳು ಭಾರತದಿಂದ ಮತ್ತು ಐವರಿಕೋಸ್ಟ್‌, ಯುಎಇ, ಸಿಂಗಪುರಕ್ಕೆ ಸೇರಿದ 30 ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಎಐಸಿಎ ಅಧ್ಯಕ್ಷ ರಾಹುಲ್‌ ಕಾಮತ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next