Advertisement
ಬಂಧಿತನಿಂದ 10.200 ಕೆ.ಜಿ. ಗಾಂಜಾ, ಮಾರುತಿ ಸ್ವಿಪ್ಟ್ ಕಾರು, ಮೊಬೈಲ್, 500 ರೂ. ಸಹಿತ ಒಟ್ಟು 5,65,500 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.ಆರೋಪಿಯು ಈ ಹಿಂದೆಯೂ ಗಾಂಜಾ ಸಾಗಾಟ ಹಾಗೂ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ಚಿಕ್ಕಮಗಳೂರು ಹಾಗೂ ಉಡುಪಿ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ಪ್ರಕರಣದಲ್ಲಿ 20 ಕೆ.ಜಿ. ಗಾಂಜಾದೊಂದಿಗೆ ಸೆರೆಯಾಗಿದ್ದ. ಚಿಕ್ಕಮಗಳೂರು ಜಿಲ್ಲಾ ಅಬಕಾರಿ ಇಲಾಖೆ ಪ್ರಕರಣದಲ್ಲಿ 10 ಕೆ.ಜಿ. ಗಾಂಜಾದೊಂದಿಗೆ ಈತನನ್ನು ಬಂಧಿಸಲಾಗಿತ್ತು.