Advertisement
ಎಸೆಸೆಲ್ಸಿ, ಪಿಯುಸಿ, ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಬೋರ್ಡ್ ಹಾಗೂ ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ರಜಾ ಅವಧಿ ಕೋಚಿಂಗ್ ಹಾಗೂ ರಜಾ ಮತ್ತು ರೆಗ್ಯುಲರ್ ಕೋಚಿಂಗ್‌ಗೆ ಪ್ರವೇಶ ಪ್ರಕ್ರಿಯೆ ಶುರುವಾಗಿದೆ.
Related Articles
Advertisement
ಪ್ರಸ್ತುತ ಪ್ರಥಮ ಪಿಯುಸಿಯಲ್ಲಿರುವವರಿಗಾಗಿ ಮುಂದಿನ ವರ್ಷದ ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆ, ನೀಟ್, ಜೆಇಇ, ಸಿಇಟಿ ಸಿದ್ಧತೆಗಾಗಿ ರಜಾ ಅವಧಿಯ ಕೋಚಿಂಗ್ ಮತ್ತು ರಜಾ ಮತ್ತು ರೆಗ್ಯುಲರ್ ಕೋಚಿಂಗ್ ಇದ್ದು, ಇದರ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಸ್ಥಳೀಯ ವಿದ್ಯಾರ್ಥಿಗಳಿಗೆ ರಜಾ ಮತ್ತು ರೆಗ್ಯುಲರ್ ಕೋಚಿಂಗ್ ಇದ್ದರೆ, ಹೊರಭಾಗದ ವಿದ್ಯಾರ್ಥಿಗಳಿಗೆ ರಜಾ ಅವಧಿಯ ಕೋಚಿಂಗ್ ಇರುತ್ತದೆ. ಪ್ರಥಮ ಪಿಯುಸಿ ಪರೀಕ್ಷೆ ಮುಗಿದ ಬಳಿಕ ಈ ತರಗತಿ ಆರಂಭಗೊಳ್ಳಲಿದೆ. 75 ದಿನಗಳ ಕಾಲ ತರಬೇತಿ ನೀಡಲಾಗುತ್ತದೆ. ಸ್ಥಳೀಯ ವಿದ್ಯಾರ್ಥಿಗಳಿಗಾಗಿ ಪ್ರತಿ ವಾರಾಂತ್ಯದಲ್ಲಿ ಸಹಾ ಕೋಚಿಂಗ್ ನೀಡಲಾಗುತ್ತದೆ.
ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕೋಚಿಂಗ್
ಪ್ರಸ್ತುತ 9ನೇ ತರಗತಿಯಲ್ಲಿ ಕಲಿಯುತ್ತಿದ್ದು, ಮುಂದಿನ ವರ್ಷ ಎಸೆಸೆಲ್ಸಿ ಬರೆಯುವವರಿಗೆ ವಿಜ್ಞಾನ ಮತ್ತು ಗಣಿತದಲ್ಲಿ ವಿಶೇಷ ಕೋಚಿಂಗ್‌ನ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ದೂರದ ಊರಿನ ವಿದ್ಯಾರ್ಥಿಗಳಿಗೆ ರಜಾ ಅವಧಿಯಲ್ಲಿ ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಗೆ ರಜಾ ಮತ್ತು ರೆಗ್ಯುಲರ್ ಕೋಚಿಂಗ್ ಎಂಬ ವಿಭಾಗ ಇರುತ್ತದೆ. ಈ ಕೋಚಿಂಗ್ ಎಪ್ರಿಲ್ 2ನೇ ವಾರದಲ್ಲಿ ಆರಂಭಗೊಳ್ಳಲಿದೆ.
ಎಕ್ಸ್‌ಪರ್ಟ್‌ನ ಕೋಚಿಂಗ್ ವ್ಯವಸ್ಥೆ ಅದೆಷ್ಟೋ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡಿಪಾಯವಾಗಿದೆ. ಕೋಚಿಂಗ್ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಯತ್ನಿಸಿ ಸಿಇಟಿ, ಜೆಇಇ, ನೀಟ್ ಪರೀಕ್ಷೆಗಳಲ್ಲಿ ಉತ್ತಮ ರ್‍ಯಾಂಕ್ ಗಳಿಸಿದ್ದಾರಲ್ಲದೇ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ ಎನ್ನುತ್ತಾರೆ ಎಕ್ಸ್ ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ| ನರೇಂದ್ರ ಎಲ್. ನಾಯಕ್.
ಎಕ್ಸ್‌ಪರ್ಟ್ ಸಮೂಹ ಸಂಸ್ಥೆಯ ಅಧೀನದಲ್ಲಿರುವ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜುಗಳಲ್ಲಿ ವಿಜ್ಞಾನ ವಿಷಯದಲ್ಲಿ ಶಿಕ್ಷಣ ನೀಡಲಾಗುತ್ತಿದ್ದು ಕೊಡಿಯಾಲ್ ಬೈಲ್ ಹಾಗೂ ವಳಚ್ಚಿಲ್‌ನಲ್ಲಿ ಕ್ಯಾಂಪಸ್‌ಗಳನ್ನು ಹೊಂದಿದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್: https://www.expertclasses.org/