Advertisement
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಪ್ರಶಾಂತ್ ಮಾರ್ಲ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯ ಅಂಗಾಂಗಗಳನ್ನು ರಾಜ್ಯ ಸರಕಾರದ ಅಂಗ ಸಂಸ್ಥೆಯಾದ “ಜೀವಸಾರ್ಥಕತೆ’ ಮೂಲಕ ಅಗತ್ಯ ವಿರುವ ರೋಗಿಗಳಿಗೆ ಒದಗಿಸಲು ಕುಟುಂಬ ತೀರ್ಮಾನಿಸಿತ್ತು. ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿ ತೆಗೆದ ಅಂಗಾಂಗಗಳನ್ನು ಬೆಂಗಳೂರು, ಚೆನ್ನೈ, ಮಣಿಪಾಲ ಹಾಗೂ ಮೂತ್ರ ಪಿಂಡ (ಕಿಡ್ನಿ)ಗಳನ್ನು ಎ.ಜೆ. ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಎರಡೂ ಕಿಡ್ನಿಗಳನ್ನು ಎ.ಜೆ. ಆಸ್ಪತ್ರೆಯ ಇಬ್ಬರು ರೋಗಿಗಳಿಗೆ ಮೀಸಲಿಟ್ಟು, ರೋಗಿಗಳ ಶಸ್ತ್ರಕ್ರಿಯೆಯ ಪ್ರಕ್ರಿಯೆ 6-7 ಗಂಟೆಗಳ ಕಾಲಾವಧಿಯಲ್ಲಿ ಮುಗಿಸ ಬೇಕಾಗಿತ್ತು. ಇದನ್ನು ಆಸ್ಪತ್ರೆಯ ತಂಡ ಸವಾಲಾಗಿ ಸ್ವೀಕರಿಸಿ,ಯಶಸ್ವಿಯಾಗಿ ಪೂರೈಸಿದೆ. ಮೂತ್ರ ಪಿಂಡ ಕಸಿ ಮಾಡಿಸಿಕೊಂಡ ರೋಗಿಗಳು 12 ದಿನಗಳೊಳಗೆ ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದರು.
Related Articles
Advertisement
ಅವರ ಹೆಸರನ್ನು ಅಜರಾಮರಗೊಳಿ ಸಲು “ಜೀವನ್ ವಿಲೀನ’ ಎಂಬ ಹೆಸರಲ್ಲಿ ಪ್ರಖ್ಯಾತ ವಾಗಿದೆ. ಅಂದಿನಿಂದ ಇಂದಿನ ವರೆಗೂ 41 ದಾನಿಗಳಿಂದ ಪಡೆದ ಅಂಗಾಂಗಗಳಿಂದ ಸುಮಾರು 150 ರೋಗಿಗಳು ಗುಣಮುಖ ರಾಗಿರುತ್ತಾರೆ ಎಂದರು.
ಡಾ| ಪ್ರೀತಮ್ ಶರ್ಮಾ, ಡಾ| ರಾಘವೇಂದ್ರ ನಾಯಕ್ ಪತ್ರಿಕಾಗೋಷ್ಠಿಯಲ್ಲಿದ್ದರು.