Advertisement

Mangaluru: 2.35 ಕೋ.ರೂ. ದರೋಡೆ ಪ್ರಕರಣ, ಆರೋಪಿಗಳ ಖುಲಾಸೆ

05:39 PM Jul 20, 2024 | Team Udayavani |

ಮಂಗಳೂರು: ವ್ಯಕ್ತಿಯೋರ್ವರನ್ನು ಅಪಹರಿಸಿ 2.35 ಕೋ.ರೂ. ದರೋಡೆಗೈದ ಪ್ರಕರಣದ ಆರೋಪಿಗಳಾದ ಅಬ್ದುಲ್‌ ಮುನಾಫ್ ಮತ್ತು ಮಹಮ್ಮದ್‌ ರಾಜಿಂನನ್ನು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ.

Advertisement

ರಥಬೀದಿಯ ಚಿನ್ನಾಭರಣಗಳ ಅಂಗಡಿಯ ಮಾಲಕ ಸಂತೋಷ್‌ ಕುಡೇìಕರ್‌ ಅವರು ತಮ್ಮ ಅಂಗಡಿಯ ಕೆಲಸಗಾರನಾಗಿದ್ದ ಮಂಜುನಾಥ ಅವರಲ್ಲಿ ಚಿನ್ನದ ಗಟ್ಟಿಗಳನ್ನು ನೀಡಿ ಮುಂಬಯಿಗೆ ಕಳುಹಿಸಿದ್ದರು. ಮಂಜುನಾಥ ಅವುಗಳನ್ನು ಮುಂಬಯಿಯ ಝವೇರಿ ಬಜಾರ್‌ನಲ್ಲಿ ನೀಡಿ 2.35 ಕೋ.ರೂ.ಗಳನ್ನು ಬ್ಯಾಗ್‌ನಲ್ಲಿಟ್ಟುಕೊಂಡು ಬಸ್‌ನಲ್ಲಿ ಮಂಗಳೂರಿಗೆ ಬಂದು 2018ರ ಅ.23ರಂದು ಮಧ್ಯಾಹ್ನ 12.20ಕ್ಕೆ ಲೇಡಿಹಿಲ್‌ನ ಬಸ್‌ ನಿಲ್ದಾಣದ ಬಳಿ ಇಳಿದು ಅಂಗಡಿಗೆ ಹೋಗಲು ರಸ್ತೆ ದಾಟುವಷ್ಟರಲ್ಲಿ ಆರೋಪಿಗಳು ಅವರನ್ನು ಇನ್ನೋವಾ ಕಾರಿನಲ್ಲಿ ಅಪಹರಿಸಿಬಜಪೆ ಪೇಟೆಯಿಂದ ಸುಮಾರು ಒಂದು ಕಿ.ಮೀ. ಮುಂದೆ ಹೋಗಿ ಜನಸಂಚಾರವಿಲ್ಲದ ಸ್ಥಳದಲ್ಲಿ ಕಾರು ನಿಲ್ಲಿಸಿ ಹಣವಿದ್ದ ಬ್ಯಾಗ್‌ ದರೋಡೆ ಮಾಡಿದ್ದರು ಎಂದು ಆರೋಪಿಸಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ಬಳಿಕ ವಶಪಡಿಸಿಕೊಂಡ ಹಣವನ್ನು ಆದಾಯ ತೆರಿಗೆ ಇಲಾಖೆಗೆ ತನಿಖೆಗೆ ನ್ಯಾಯಾಲಯ ಆದೇಶ ಮಾಡಿತ್ತು.

ನ್ಯಾಯಾಲಯವು ಅಭಿಯೋಜನ ಪರವಾಗಿ ಸುಮಾರು 16 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿತ್ತು. ಅವರಲ್ಲಿ ಬೆರಳಚ್ಚು ತಜ್ಞರು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ನುಡಿದಿದ್ದರು. ಅಲ್ಲದೆ ಆದಾಯ ತೆರಿಗೆ ಇಲಾಖೆಯ ಸಹಾಯಕ ಸಹಾಯಕ ನಿರ್ದೇಶಕ ಶರೀಫ್ ರಶೀದ್‌ ಕೂಡ ಅಭಿಯೋಜನ ಪರವಾಗಿ ಸಾಕ್ಷಿ ನುಡಿದಿದ್ದರು.

ಸರಕಾರ ಮತ್ತು ಆರೋಪಿಗಳ ಪರ ವಾದವನ್ನು ಆಲಿಸಿದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಅವರು, ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫ‌ಲವಾಗಿದೆ ಎಂದು ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ.

ಆರೋಪಿಗಳ ಪರವಾಗಿ ವೇಣು ಕುಮಾರ್‌ ಮತ್ತು ಯುವರಾಜ್‌ ಕೆ.ಅಮೀನ್‌ ವಾದಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next