Advertisement

ದ.ಕ.: ತಾಯ್ನಾಡಿಗೆ ಮರಳಲು ಇನ್ನೂ 15 ಮಂದಿ ವಿದ್ಯಾರ್ಥಿಗಳು ಬಾಕಿ

11:23 PM Mar 04, 2022 | Team Udayavani |

ಮಂಗಳೂರು: ಯುದ್ಧಪೀಡಿತ ಉಕ್ರೇನ್‌ ಗಡಿ ದಾಟಿದ ದಕ್ಷಿಣ ಕನ್ನಡ ಮೂಲದ 15 ಮಂದಿ ವಿವಿಧ ದೇಶಗಳ ಆಶ್ರಯತಾಣಗಳಲ್ಲಿದ್ದು, ಭಾರತದ ಏರ್‌ಲಿಫ್ಟ್ಗಾಗಿ ಕಾಯುತ್ತಿದ್ದಾರೆ.

Advertisement

18 ಮಂದಿಯಲ್ಲಿ ಮಂಗಳೂರು ಬಿಜೈ ನ್ಯೂರೋಡ್‌ನ‌ ಅನುಷಾ ಭಟ್‌ ಮತ್ತು ಮೂಡುಬಿದಿರೆಯ ಪ್ರಣವ್‌ ಕುಮಾರ್‌ ಎಸ್‌. ಮಂಗಳೂರು ತಲುಪಿದ್ದಾರೆ. ಪೂಜಾ ಮಲ್ಲಪ್ಪ ಬೆಂಗಳೂರು ತಲುಪಿದ್ದಾರೆ. ಪ್ರೀತಿ ಪೂಜಾರಿ ದಿಲ್ಲಿಗೆ ತಲುಪಿದ್ದಾರೆ.

ಈಗಾಗಲೇ ಉಕ್ರೇನ್‌ ಗಡಿ ದಾಟಿರುವ ಮಂಗಳೂರಿನ ಕ್ಲೇಟನ್‌, ಲಕ್ಷಿತಾ ಅವರು ಸ್ಲೊವಾಕಿಯಾದಲ್ಲಿದ್ದಾರೆ. ಪೃಥ್ವಿರಾಜ್‌ ಬುಡಾಪೆಸ್ಟ್‌ನಿಂದ ದಿಲ್ಲಿಯತ್ತ ಪ್ರಯಾಣ ಬೆಳೆಸಿದ್ದಾರೆ.

ಸಾಕ್ಷಿ ಸುಧಾಕರ್‌ ಮತ್ತು ಲಾಯ್ಡ ರೊಮೇನಿಯಾದ ಬುಕಾರೆಸ್ಟ್‌ನಲ್ಲಿ ಮತ್ತು ಅನೈನಾ ಪೋಲೆಂಡ್‌ ದೇಶಗಳ ಪುನರ್ವಸತಿ ಕೇಂದ್ರಗಳಲ್ಲಿದ್ದಾರೆ. ನೈಮಿಷಾ ಅವರು ಐವಿವ್‌ನತ್ತ ಪ್ರಯಾಣಿಸುತ್ತಿದ್ದಾರೆ. ಹೀನಾ ಫಾತಿಮಾ ಪೋಲಂಡ್‌ ತಲುಪಿದ್ದಾರೆ. ಶೇಖ್‌ ಮೊಹಮ್ಮದ್‌ ಬಂಕರ್‌ನಿಂದ ಖಾರ್ಕಿವ್‌ ರೈಲು ನಿಲ್ದಾಣದ ಕಡೆಗೆ ಪ್ರಯಾಣಿಸುತ್ತಿದ್ದಾರೆ. ತಾಹಾ, ಶಲ್ವಿನ್‌ ಪ್ರೀತಿ ಅರಾನ್ಹಾ ಉಕ್ರೇನ್‌ ತೊರೆದು ಹಂಗೇರಿ ತಲುಪಿದ್ದಾರೆ.

ಅಂಡ್ರಿಯಾನಾ ಲೂವಿಸ್‌ ಹಂಗೆರಿಯಲ್ಲಿ, ಆಂಟೊನಿ ಪಿರೇರಾ ರೊಮೇನಿಯಾದಲ್ಲಿ, ಅನ್ಶಿತಾ ರೆಷಲ್‌ ಪದ್ಮಶಾಲಿ ಹಂಗೇರಿಯಲ್ಲಿ, ಅಹ್ಮದ್‌ ಸಾದ್‌ ಅರ್ಷದ್‌ ಸೊವಾಕಿಯಾದಲ್ಲಿ, ಮೊಹಮ್ಮದ್‌ ಮಶಾಲ್‌ ಆರಿಫ್ ಹಂಗೇರಿಯಲ್ಲಿ, ಸಾಕ್ಷಿ ಸುಧಾಕರ್‌ ಬುಕಾರೆಸ್ಟ್‌ನಲ್ಲಿದ್ದಾರೆ. ಪ್ರೀತಿ ಪೂಜಾರಿ ದಿಲ್ಲಿ ತಲುಪಿದ್ದಾರೆ.

Advertisement

ಪೂಜಾ ಮಲ್ಲಪ್ಪ ಅತಿವಾಲ್‌ ಬೆಂಗಳೂರಿನ ಮನೆಗೆ ತಲುಪಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಮಾಹಿತಿ ನೀಡಿದ್ದಾರೆ.

ರೋಹನ್‌ ಇಂದು ಬ್ರಹ್ಮಾವರಕ್ಕೆ ಸಾಧ್ಯತೆ
ಉಡುಪಿ: ಉಕ್ರೇನ್‌ನಲ್ಲಿ ಯುದ್ಧದ ತೀವ್ರತೆ ಹೆಚ್ಚಾಗಿರುವ ಖಾರ್ಕಿವ್‌ ನಗರದಲ್ಲಿ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿದ್ದ ರೋಹನ್‌ ಧನಂಜಯ ಬಗ್ಲಿ ಶುಕ್ರವಾರವೇ ದಿಲ್ಲಿ ಮೂಲಕ ಬೆಂಗಳೂರಿಗೆ ಬಂದಿದ್ದು, ಶನಿವಾರ ಬ್ರಹ್ಮಾವರಕ್ಕೆ ಬರುವ ಸಾಧ್ಯತೆಯಿದೆ.

ಖಾರ್ಕಿವ್‌ನ ಮೆಡಿಕಲ್‌ ವಿ.ವಿ.ಯಲ್ಲಿ ಓದುತ್ತಿದ್ದ ರೋಹನ್‌ ಕೆಲವು ದಿನ ಅಲ್ಲಿಯೇ ಬಂಕರ್‌ನಲ್ಲಿದ್ದರು. ತದನಂತರ ಪೋಲಂಡ್‌ಗೆ ಹೋಗಿ, ಅಲ್ಲಿಂದ ದಿಲ್ಲಿಗೆ ಬಂದಿದ್ದರು. ಅವರ ತಂದೆ ಡಾ| ಧನಂಜಯ ಬಗ್ಲಿಯವರು ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾರೆ.

ಜಿಲ್ಲೆಯ ನಿವಾಸಿಗಳಾದ ಗ್ಲೆನ್‌ವಿಲ್‌ ಫೆರ್ನಾಡಿಂಸ್‌ ಸದ್ಯ ರಾಯಭಾರ ಕಚೇರಿಯ ನಿರ್ದೇಶನದಂತೆ ಖಾರ್ಕಿವ್‌ ಸಮೀಪದ ನಗರದಲ್ಲಿದ್ದಾರೆ. ಅನಿಫ್ರೈಡ್‌ ರಿಡ್ಲಿ ಡಿ’ಸೋಜಾ ಹಂಗೇರಿಯಲ್ಲಿರುವ ಬಗ್ಗೆ ಮಾಹಿತಿಯಿದೆ.

ಪೋಲಂಡ್‌ ಗುರುದ್ವಾರದಲ್ಲಿ ಉಚಿತ ಆಹಾರ
ಮೂಡುಬಿದಿರೆ: ಉಕ್ರೆನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳಿಗೆ ಪೋಲಂಡ್‌ ದೇಶದ ಗುರುದ್ವಾರದಲ್ಲಿ ಉಚಿತ ಆಹಾರ ಮತ್ತು ಸಹಾಯವಾಣಿಯ ವ್ಯವಸ್ಥೆ ಆಗಿದೆ. ಮೂಡುಬಿದಿರೆಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಕೋರಿಕೆ ಮೇರೆಗೆ ನ್ಯೂಯಾರ್ಕ್‌ ಮೂಲದ ಶಿಷ್ಯವರ್ಗದವರು ನೊಂದ ವಿದ್ಯಾರ್ಥಿಗಳಿಗೆ ಸಹಕಾರದ ಭರವಸೆ ನೀಡಿದ್ದಾರೆ. ಸಂಕಷ್ಟಕ್ಕೆ ಒಳಗಾದ ಭಾರತೀಯರು ಗುರುದ್ವಾರದ ಪ್ರತಿನಿಧಿಗಳನ್ನು ಸಂಪರ್ಕಿಸಬಹುದು.

ಕಾಸರಗೋಡಿನ ನಾಲ್ವರು ಮನೆಗೆ
ಕಾಸರಗೋಡು: ಉಕ್ರೇನ್‌ ನಲ್ಲಿ ಸಂಕಷ್ಟಕ್ಕೀಡಾಗಿದ್ದ ಜಿಲ್ಲೆಯ ನಾಲ್ವರು ಸ್ವದೇಶಕ್ಕೆ ತಲುಪಿದ್ದಾರೆ.ಸೂರ್ಲು ಬಟ್ಟಂಪಾರೆ ನಿವಾಸಿ ಹಸನ್‌-ಸೆಮೀರಾ ದಂಪತಿಯ ಪುತ್ರಿ ಆಯಿಷಾ ಹನ್ನ, ಮಾಲೋಂ ಪೆರುಂಬಳ್ಳಿಕುನೇನಲ್‌ ಜೋಜೋ ಮ್ಯಾಥ್ಯೂ ಅವರ ಪುತ್ರಿ ಅಮ್ಮು ಜೋಜೋ, ಸಮೀಪದ ನಾಟ್ಟುಕಲ್ಲಿನ ಇಲಂಗತ್‌ ರಾಜೇಂದ್ರನ್‌ ಪುತ್ರಿ ಅಖೀಲಾ ಹಾಗೂ ಕಾಂಞಂಗಾಡ್‌ನ‌ ಮಿಥುನ್‌ ಮಧು ಸುರಕ್ಷಿತವಾಗಿ ಮನೆ ಸೇರಿದವರು. ಮಕ್ಕಳ ಆಗಮನದಿಂದ ಹೆತ್ತವರು ನಿಟ್ಟುಸಿರು ಬಿಟ್ಟಿದ್ದು, ಕೇಂದ್ರ ಸರಕಾರದ ಯಶಸ್ವಿ ಕಾರ್ಯಾಚರಣೆಯಿಂದ ಇದು ಸಾಧ್ಯವಾಗಿದೆ ಎಂದು ಕೃತಜ್ಞತೆ ಅರ್ಪಿಸಿದ್ದಾರೆ.

ಅಮ್ಮು ಜೋಜೋ ಉಕ್ರೇನ್‌ನಲ್ಲಿ ನಾಲ್ಕನೇ ವರ್ಷದ ವೈದ್ಯ ವಿದ್ಯಾರ್ಥಿನಿ. ಅಖೀಲ ರಾಜ್‌ ಪ್ರಥಮ ವರ್ಷದ ಬಿಎಸ್‌ಸಿ ನರ್ಸಿಂಗ್‌ ವಿದ್ಯಾರ್ಥಿನಿ. ಅವರಿಬ್ಬರೂ ಭಾರತೀಯ ರಾಯಭಾರ ಕಚೇರಿಯ ಮುಖಾಂತರ ಮಾ. 1ರಂದು ದಿಲ್ಲಿಗೆ ತಲುಪಿದ್ದರು. ಅಲ್ಲಿಂದ ಕೊಚ್ಚಿಗೆ ಬಂದು ಕೇರಳ ಸರಕಾರ ವಿಶೇಷವಾಗಿ ಒದಗಿಸಿದ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಕಾಂಞಂಗಾಡ್‌ಗೆ ತಲುಪಿದ್ದಾರೆ.

ಜಿಲ್ಲೆಯ ಬಹುತೇಕರು
ಸುರಕ್ಷಿತ ಪ್ರದೇಶಕ್ಕೆ
ಉಕ್ರೇನ್‌ನಲ್ಲಿದ್ದ ಜಿಲ್ಲೆಯ ಬಹುತೇಕರು ಗಡಿಭಾಗದ ಸುರಕ್ಷಿತ ಪ್ರದೇಶಕ್ಕೆ ತಲುಪಿರುವುದಾಗಿ ಮಾಹಿತಿ ಲಭಿಸಿದೆ. ಕಾಂಞಂಗಾಡ್‌ನ‌ ಆಗ್ನ ಅಸೀಸ್‌ ಸಹಿತ ಹಲವರು ಹಂಗೇರಿ ವಿಮಾನ ನಿಲ್ದಾಣಕ್ಕೆ ತಲುಪಿ
ರುವುದಾಗಿ ತಿಳಿದುಬಂದಿದೆ.

ರುಮೇನಿಯಾ ತಲುಪಿದ ತೃಕ್ಕರಿಪುರದ ವಿದ್ಯಾರ್ಥಿಗಳು
ತೃಕ್ಕರಿಪುರದ ವಿದ್ಯಾರ್ಥಿಗಳು ರೊಮೇನಿಯಾ ತಲುಪಿದ್ದಾರೆ. ತಾನು ಹಾಗೂ ತೃಕ್ಕರಿಪುರದ ನಿವಾಸಿಗಳ ಸಹಿತ 300 ಮಂದಿ ಭಾರತೀಯ ವಿದ್ಯಾರ್ಥಿಗಳು ಬಸ್‌ನಲ್ಲಿ ಪ್ರಯಾಣಿಸಿ ರೊಮೇನಿಯಾ ತಲು ಪಿದ್ದೇವೆ. ರೊಮೇನಿಯಾದ ಮೋಲ್ಡೋವಾ ತನಕ ನಾವಾಗಿಯೇ ಬಂದಿದ್ದು, ಅಲ್ಲಿ ಭಾರತೀಯ ದೂತಾ ವಾಸದ ನೆರವು ಲಭಿಸಿತು ಶಮಾ ಅಸೀಸ್‌ ತಿಳಿಸಿದ್ದಾರೆ.

ಕೊಡಗು: ಇಬ್ಬರು ವಿದ್ಯಾರ್ಥಿಗಳು ತವರಿಗೆ
ಮಡಿಕೇರಿ: ಉಕ್ರೇನ್‌ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯು ತ್ತಿದ್ದ ಕುಶಾಲನಗರದ ಬಿ.ಕೆ. ಲಿಖೀತ್‌ ಹಾಗೂ ಚಂದನ್‌ ಗೌಡ ಶುಕ್ರವಾರ ಮನೆ ತಲುಪಿದ್ದಾರೆ. ವಿದ್ಯಾರ್ಥಿಗಳಾದ ಅಶ್ವಿ‌ನ್‌ ಕುಮಾರ್‌, ನಿರ್ಮಲಾ ಎಂ.ಪಿ ಹಾಗೂ ಡಯಾನಾ ಮೇರಿ ಮಾ. 5ರಂದು ಕೊಡಗಿಗೆ ಬರುವ ಸಾಧ್ಯತೆಗಳಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next