Advertisement

Mangaluru ಅತ್ಯಾಚಾರ ಪ್ರಕರಣ: ಆರೋಪಿ ಖುಲಾಸೆ

09:07 PM Jan 30, 2024 | Team Udayavani |

ಮಂಗಳೂರು: ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯೋರ್ವನನ್ನು ಮಂಗಳೂರಿನ ಪೋಕ್ಸೋ ವಿಶೇಷ ಕೋರ್ಟ್‌ ಖುಲಾಸೆಗೊಳಿಸಿದೆ.

Advertisement

ಅಬೂಬಕರ್‌ ಸಿದ್ದಿಕ್‌ ಆಲಿಯಾಸ್‌ ಸಿದ್ದಿಕ್‌ ಉಳ್ಳಾಲ್‌ ಖುಲಾಸೆಗೊಳಗಾದ ಆರೋಪಿ. ಈತ ತನ್ನ ಊರಿನ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಅಕೆಯ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಆರೋಪಿಸಲಾಗಿತ್ತು. ವಿಚಾರಣೆ ನಡೆಸಿದ ಮಂಗಳೂರಿನ ವಿಶೇಷ ಪೋಕ್ಸೋ ಮತ್ತು ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರು ಅಭಿಯೋಜನೆಯು ಅಪರಾಧವನ್ನು ಸಾಬೀತು ಮಾಡಲು ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟು ಆರೋಪಿಯನ್ನು ಖುಲಾಸೆಗೊಳಿಸಿ ಆದೇಶ ನೀಡಿದ್ದಾರೆ.

ಆರೋಪಿಯ ಪರವಾಗಿ ಮಂಗಳೂರಿನ ಲೆಕ್ಸ್‌ ಜ್ಯೂರೀಸ್‌ ಲಾ ಚೇಂಬರ್‌ನ ವಕೀಲರಾದ ಓಮರ್‌ ಫಾರೂಕ್‌ ಮೂಲ್ಕಿ, ಮಹಮ್ಮದ್‌ ಮುಡಿಪು, ಹೈದರ್‌ ಅಲಿ ಕಿನ್ನಿಗೋಳಿ, ತೌಸಿಪ್‌ ಸಚ್ಚರಿಪೇಟೆ, ಮುಹಮ್ಮದ್‌ ರಿಫಾಝ್ ಬೆಂಗ್ರೆ ವಾದಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next